ನವದೆಹಲಿ: ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ದೇಶಾದ್ಯಂತ ನಿನ್ನೆಯಿಂದ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಿದೆ. ಲಸಿಕೆ ನಿರ್ವಹಣೆಗಾಗಿ ರೂಪಿಸಿರುವ ಕೋ -ವಿನ್ ಆಪ್ ಜನ ಸಾಮಾನ್ಯರಿಗೆ ಲಭ್ಯವಿರುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸದ್ಯಕ್ಕೆ ಜನಸಾಮಾನ್ಯರಿಗೆ ಕೋ -ವಿನ್ ಆಪ್ ಲಭ್ಯವಿಲ್ಲ. ಸಾರ್ವಜನಿಕರಿಗೆ ಇದನ್ನು ಬಿಡುಗಡೆ ಮಾಡಿದ ನಂತರ ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಂಡು ಹೆಸರು ನೋಂದಾಯಿಸಿಕೊಳ್ಳಬಹುದು. ಅಧಿಕಾರಿಗಳ ಬಳಕೆಗೆ ಮಾತ್ರ ಸದ್ಯಕ್ಕೆ ಆಪ್ ಸೀಮಿತವಾಗಿದ್ದು, ಇದಕ್ಕೆ ಲಸಿಕೆ ಪಡೆಯುವ ಫಲಾನುಭವಿಗಳ ಹೆಸರನ್ನು ಸೇರ್ಪಡೆ ಮಾಡಲಾಗುವುದು ಎಂದು ಹೇಳಲಾಗಿದೆ.