ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮಥುರಾದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ನಿಷೇಧಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.
ಧಾರ್ಮಿಕ ಮಹತ್ವವಿರುವ ನಗರದಲ್ಲಿ ಮಾಂಸ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಹಿಂದೆ ಹೇಳಿದ್ದರು. ಮಥುರಾದ ವೈಭವವನ್ನು ಪುನರುಜ್ಜೀವನಗೊಳಿಸಲು, ಮದ್ಯ ಮತ್ತು ಮಾಂಸದ ವ್ಯಾಪಾರ ಬಂದ್ ಮಾಡಲಾಗ್ತಿದೆ. ಮದ್ಯ ಮತ್ತು ಮಾಂಸ ಮಾರಾಟ ಮಾಡುವವರು ಹಾಲು ಮಾರಾಟ ಆರಂಭಿಸಬಹುದು ಎಂದು ಸಿಎಂ ಹೇಳಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ಧಾರದ ಬಗ್ಗೆ ಮಾತನಾಡಿದ ಕ್ಯಾಬಿನೆಟ್ ಮಂತ್ರಿ ಮೊಹ್ಸಿನ್ ರಜಾ, ಮಥುರಾ ಅಥವಾ ಯಾವುದೇ ಧಾರ್ಮಿಕ ಪವಿತ್ರ ಸ್ಥಳದಲ್ಲಿ ಮಾಂಸ ಮತ್ತು ಮದ್ಯದ ಅಗತ್ಯವಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ಧಾರ ಸರಿಯಾಗಿದೆ ಎಂದವರು ಹೇಳಿದ್ದಾರೆ.