ಬೆಂಗಳೂರು: ಜನವರಿಯಿಂದ 10 ಮತ್ತು 12 ನೇ ತರಗತಿ ಆರಂಭಿಸಲು ಶಿಫಾರಸು ಮಾಡಲಾಗಿದೆ. ಕೋವಿಡ್ ತಾಂತ್ರಿಕ ಸಮಿತಿ, ರಾಜ್ಯದಲ್ಲಿ ಮುಂದಿನ ಜನವರಿ ಅಥವಾ ಫೆಬ್ರವರಿಯಲ್ಲಿ ಕೊರೋನಾ ಎರಡನೆಯ ಅಲೆ ಶುರುವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಇದರ ನಡುವೆ ಜನವರಿಯಿಂದಲೇ 10 ಮತ್ತು 12ನೇ ತರಗತಿ ಶಾಲೆ ಆರಂಭಿಸಲು ಶಿಫಾರಸು ಮಾಡಲಾಗಿದೆ. ಜನವರಿಯಲ್ಲಿ 10, 12 ನೇ ತರಗತಿಯನ್ನು ಆರಂಭಿಸಿ ನಂತರ 9 ರಿಂದ 11 ನೇ ತರಗತಿ ಮಕ್ಕಳಿಗೆ ಶಾಲೆ ಆರಂಭಿಸಬಹುದು ಎಂದು ಹೇಳಲಾಗಿದೆ. ಕಳೆದ ತಿಂಗಳು 23 ರಂದು ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಡಿಸೆಂಬರ್ ನಲ್ಲಿ ಶಾಲೆ ಆರಂಭಿಸದಿರಲು ತೀರ್ಮಾನ ಕೈಗೊಳ್ಳಲಾಗಿದೆ.