
ಯಡಿಯೂರಪ್ಪ ಎರಡು ವರ್ಷ ಯಶಸ್ವಿಯಾಗಿ ಆಡಳಿತ ನಡೆಸಿದ್ದಾರೆ. ಅವರು ರಾಜೀನಾಮೆ ನೀಡಿರುವುದು ಕಾರ್ಯಕರ್ತರಿಗೆ ಬೇಸರದ ಸಂಗತಿಯಾಗಿದೆ ಎಂದು ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಕೊರೋನಾ, ಪ್ರವಾಹ ಪರಿಸ್ಥಿತಿಯನ್ನು ಮೀರಿ ಯಡಿಯೂರಪ್ಪ ಅವರು ಉತ್ತಮವಾಗಿ ಆಡಳಿತ ನಡೆಸಿದ್ದು, ಯಡಿಯೂರಪ್ಪನವರಿಗೆ ಧನ್ಯವಾದ ಹೇಳುತ್ತೇನೆ ಎಂದು ರಘುಪತಿ ಭಟ್ ತಿಳಿಸಿದ್ದಾರೆ.
ಧೈರ್ಯದಿಂದ ನಿರ್ಧಾರ ಕೈಗೊಳ್ಳುವವರು ಮುಖ್ಯಮಂತ್ರಿಯಾಗಬೇಕು. ಕರಾವಳಿಯನ್ನು ಅಭಿವೃದ್ಧಿ ಮಾಡುವ ನಾಯಕ ರಾಜ್ಯಕ್ಕೆ ಬೇಕು. ಅಧಿಕಾರಿಗಳಿಂದ ಕೆಲಸ ಮಾಡಿಸುವ ಮುಖ್ಯಮಂತ್ರಿ. ಬೇಕು ಎಂದು ಹೇಳಿದ್ದಾರೆ.