ಬೆಂಗಳೂರು: ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ವಿವಿಧ ವರ್ಗಗಳಿಗೆ ನೆರವಾಗುವಂತೆ ಮೂರು ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೊಂದು ಪ್ಯಾಕೇಜ್ ಘೋಷಣೆಗೆ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಕಳೆದ ಮೂರು ಪ್ಯಾಕೇಜ್ ಗಳಲ್ಲಿ ಕಾರ್ಮಿಕರು, ರೈತರು ಸೇರಿ ಸಂಕಷ್ಟದಲ್ಲಿದ್ದ ವರ್ಗದವರಿಗೆ ನೆರವು ನೀಡಲಾಗಿದೆ. ಇದೇ ಮಾದರಿಯಲ್ಲಿ ಹಲವು ನೆರವು ಸಿಗದ ವರ್ಗಗಳನ್ನು ಗುರುತಿಸಿ ಪ್ಯಾಕೇಜ್ ನೀಡುವ ಕುರಿತು ಸಿಎಂ ಚಿಂತನೆ ನಡೆಸಿದ್ದಾರೆ. ಮತ್ತೊಂದು ಪ್ಯಾಕೇಜ್ ಗೆ ಆರ್ಥಿಕ ಇಲಾಖೆ ಸಮ್ಮತಿ ಸೂಚಿಸಿಲ್ಲ. ಘೋಷಣೆಯಾದ ಪ್ಯಾಕೇಜ್ ಗೆ ಹಣಕಾಸು ಹೊಂದಿಸಲು ಕಸರತ್ತು ನಡೆದಿದ್ದು ಮತ್ತೊಂದು ಪ್ಯಾಕೇಜ್ ಬೇಡವೆಂದು ಸಲಹೆ ನೀಡಿದೆ. ಸಿಎಂ ಯಡಿಯೂರಪ್ಪ ಅಧಿಕಾರಿಗಳೊಂದಿಗೆ ಚರ್ಚಿಸಿ ಹಣಕಾಸು ಹೊಂದಿಸಿ ಪ್ಯಾಕೇಜ್ ಘೋಷಣೆಗೆ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.