
ಬೆಂಗಳೂರು: ಪರಿಷ್ಕೃತಗೊಂಡ ವಿದ್ಯಾಗಮ ಯೋಜನೆ ಜನವರಿ 1 ರಿಂದ ಆರಂಭವಾಗಲಿದೆ. ಅದೇ ರೀತಿ ಜನವರಿ 1 ರಿಂದ 10, 12 ನೇ ತರಗತಿ, ಜನವರಿ 15 ರಿಂದ 8, 9 ಮತ್ತು 11 ನೇ ತರಗತಿಗಳನ್ನು ಆರಂಭಿಸುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ಶಾಲೆಗಳ ಆರಂಭ ಕುರಿತಾಗಿ ಮಹತ್ವದ ಸಭೆ ನಡೆಯಲಿದೆ. ವಿದ್ಯಾಗಮ ಯೋಜನೆ ತರಗತಿಗಳ ಜೊತೆಯಲ್ಲೇ 10 ಮತ್ತು 12 ನೇ ತರಗತಿಗಳನ್ನು ಆರಂಭಿಸಲು ಚರ್ಚೆ ನಡೆದಿದೆ. ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳನ್ನು ಆರಂಭಿಸಲು ತಾಂತ್ರಿಕ ಸಮಿತಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದು, ಇಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.