ಬೆಂಗಳೂರು: ಪ್ಯಾಕೇಜ್ ಗಳು ಕೇವಲ ಜಾಹೀರಾತು ನೀಡಲಷ್ಟೇ ಸೀಮಿತವಾಗಿದೆ ಎಂದು ಆನೇಕಲ್ ನಲ್ಲಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಪರಿಹಾರ ಕೊಡುವುದರಲ್ಲಿ ಸರ್ಕಾರಕ್ಕೆ ಉದಾರತೆ ಇಲ್ಲ ಎಂದು ಅವರು ಟೀಕಿಸಿದ್ದಾರೆ. ಪ್ರತಿ ಕುಟುಂಬಕ್ಕೆ 10 ಸಾವಿರ ರೂಪಾಯಿ ಕೊಟ್ಟರೆ ಅನುಕೂಲವಾಗುತ್ತಿತ್ತು. ಪ್ರತಿ ಕುಟುಂಬಕ್ಕೆ 10,000 ರೂ. ನೀಡಿದರೆ ದರಿದ್ರ ಬರಲ್ಲ. ಜನಸಾಮಾನ್ಯರು ಹಣವನ್ನು ಮತ್ತೆ ನಿಮಗೆ ಕೊಡುತ್ತಾರೆ ಎಂದು ಹೇಳಿದ್ದಾರೆ.
ಕೆರೆಗಳನ್ನು ಉಳಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿರುವುದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಬಿಜೆಪಿಯವರು ನೂರಾರು ಕೆರೆ ನುಂಗಿ ನೀರು ಕುಡಿದಿದ್ದಾರೆ. ಮುಖ್ಯಮಂತ್ರಿಗಳ ಟ್ವೀಟ್ ನೋಡಿ ನನಗೆ ನಗು ಬರುತ್ತದೆ ಎಂದು ಹೇಳಿದ್ದಾರೆ.
ಆನೇಕಲ್ ನಲ್ಲಿ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು, ಕೆಂಪೇಗೌಡರ ಹೆಸರಿನಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಕೆರೆ ನುಂಗಿ ನೀರು ನೀರು ಕುಡಿದವರೆ ಕೆರೆ ಉಳಿಸಲು ಟ್ವೀಟ್ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.