ಕೊರೊನಾ 2ನೆ ಅಲೆಯಿಂದ ಪಾರಾಗೋಕೆ ರಾಜ್ಯ ಸರ್ಕಾರ ಜೂನ್ 7ನೇ ತಾರೀಖಿನವರೆಗೆ ಲಾಕ್ಡೌನ್ ಆದೇಶವನ್ನ ವಿಸ್ತರಿಸಿದೆ. ಆದರೆ ಈ ಬಾರಿಯೂ ಲಾಕ್ಡೌನ್ ವಿಸ್ತರಣೆ ಮಾಡ್ತಾರಾ ಇಲ್ಲ ವಿನಾಯ್ತಿ ನೀಡುತ್ತಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡ್ತಾನೇ ಇದೆ.
ಈ ನಡುವೆ ಸಿಎಂ ಯಡಿಯೂರಪ್ಪ ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನ ಕರೆದಿದ್ದು ಇಲ್ಲಿ ಲಾಕ್ಡೌನ್ ಭವಿಷ್ಯ ನಿರ್ಧಾರವಾಗಬಹುದು ಎಂದು ಅಂದಾಜಿಸಲಾಗಿದೆ.
ಲಾಕ್ಡೌನ್ ಆದೇಶದಿಂದಾಗಿ ರಾಜಧಾನಿಯಲ್ಲಿ ಸೋಂಕಿನ ಸಂಖ್ಯೆ ತಹಬದಿಗೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿಬಿಟ್ಟರೆ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರಿನಲ್ಲಿ ಜೂನ್ 7ರ ಬಳಿಕವೂ ಲಾಕ್ಡೌನ್ ಮಾದರಿಯ ನಿರ್ಬಂಧಗಳು ಮುಂದುವರಿಯಲಿ ಅಂತಾ ಬಿಬಿಎಂಪಿ ರಾಜ್ಯ ಸರ್ಕಾರಕ್ಕೆ ಹೇಳಿದೆ ಎನ್ನಲಾಗಿದೆ.