
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವತಿಯಿಂದ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ನೀಡಿದ್ದ 14 ನಿವೇಶನಗಳ ಕ್ರಯ ಪತ್ರ ನೋಂದಣಿ ರದ್ದುಗೊಳಿಸಲಾಗಿದೆ.
ಮುಡಾ ಆಯುಕ್ತ ರಘುನಂದನ್ ಈ ಬಗ್ಗೆ ಮಾಹಿತಿ ನೀಡಿದ್ದು, ಯಾರೇ ನಿವೇಶನ ವಾಪಸ್ ನೀಡಿದರೂ ಹಿಂಪಡೆಯುತ್ತೇವೆ. ಸಿಎಂ ಪತ್ನಿ ಪಾರ್ವತಿ ಅವರು 14 ನಿವೇಶನ ಹಿಂತಿರುಗಿಸಿದ್ದಾರೆ. ವಿಜಯನಗರದಲ್ಲಿನ 14 ನಿವೇಶನಗಳ ಕ್ರಯಪತ್ರ ರದ್ದುಗೊಳಿಸಲಾಗಿದೆ. ಈ 14 ನಿವೇಶನಗಳ ಕ್ರಯಪತ್ರ ರದ್ದು ಮಾಡಿರುವುದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.