ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವದ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಯೋಜನೆಯಿಂದ ಸರ್ಕಾರದ ಆದಾಯ ಹೆಚ್ಚಳವಾಗಿದೆ ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯದಲ್ಲಿ ಹೆಚ್ಚಳವಾಗಿದೆ. ಹಾಗೂ ಮುಜರಾಯಿ ದೇವಸ್ಥಾಗಳಲ್ಲಿ ಭರ್ಜರಿ ಕಾಣಿಕೆ ಸಂಗ್ರಹವಾಗಿದೆ. ದುಡಿಯುವ ವರ್ಗಕ್ಕೆ ‘ಶಕ್ತಿ ಯೋಜನೆ ವರದಾನವಾಗಿದೆ. ನಮ್ಮ ಉದ್ದೇಶ ಈಡೇರಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಈ ಹಿನ್ನೆಲೆ ಟ್ವಿಟರ್ ನಲ್ಲಿ ಸಿಎಂ ಸಿದ್ದರಾಮಯ್ಯ ಸಂತಸ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ನಮ್ಮ ಉದ್ದೇಶ ಈಡೇರಿದೆ, ಯಶಸ್ವಿಯಾಗಿ ಈಡೇರುತ್ತಿರುವ ಬಗ್ಗೆ ಓದಿ ಸಂತಸವಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಮನೆಗೆಲಸ, ಗಾರ್ಮೆಂಟ್ಸ್, ದಿನಗೂಲಿ ಕೆಲಸ ಹೀಗೆ ಅಲ್ಪ ದುಡಿಮೆಗೆ ಪ್ರಯಾಣವೆಚ್ಚ ಭರಿಸಲಾಗದೆ ಬದುಕಿನ ಕನಸುಗಳನ್ನು ಕೈಬಿಟ್ಟು ಸಂಕಷ್ಟದಲ್ಲಿ ದಿನದೂಡುತ್ತಿದ್ದ ಅಸಂಖ್ಯ ಮಹಿಳೆಯರ ಕನಸುಗಳಿಗೆ ಮರುಜೀವ ತುಂಬಿ, ಸ್ವಂತ ಸಂಪಾದನೆ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವರನ್ನು ಸಬಲೀಕರಣಗೊಳಿಸುವುದು ನಮ್ಮ ಶಕ್ತಿ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಇಂದು ನಮ್ಮ ಈ ಉದ್ದೇಶ ಯಶಸ್ವಿಯಾಗಿ ಈಡೇರುತ್ತಿರುವ ಬಗ್ಗೆ ಓದಿ ಸಂತಸವಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ರಾಜ್ಯ ಸರ್ಕಾರ ಮಹತ್ವದ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದ ಹಿನ್ನೆಲೆ ದೇವಸ್ಥಾನಗಳಿಗೆ ಭರ್ಜರಿ ಕಲೆಕ್ಷನ್ ಆಗಿದೆ.ಉಚಿತ ಪ್ರಯಾಣ ಶುರುವಾದಾಗಿನಿಂದ ಇಲ್ಲಿವರೆಗೆ ಮಹಿಳೆಯರು ಪುಣ್ಯ ಕ್ಷೇತ್ರಗಳಿಗೆ ದಾಂಗುಡಿ ಇಡುತ್ತಿದ್ದು, ಭರ್ಜರಿಯಾಗಿ ಕಾಣಿಕೆ ಸಂಗ್ರಹವಾಗಿದೆ. ಒಂದೇ ತಿಂಗಳಲ್ಲಿ ಬರೋಬ್ಬರಿ 25 ಕೋಟಿ ಕಾಣಿಕೆ ಸಂಗ್ರಹವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶ್ರೀರಂಗಪಟ್ಟಣ ನಿಮಿಷಾಂಬ ದೇವಾಲಯದಲ್ಲಿ 27,98 ಲಕ್ಷ, ಕುಕ್ಕೆ ಸುಬ್ರಮಣ್ಯದಲ್ಲಿ 11.16 ಕೋಟಿ, ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ 3,63 ಕೋಟಿ. ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯದಲ್ಲಿ 1,38 ಕೋಟಿ. ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ 1.27 ಕೋಟಿ. ಬೆಂಗಳೂರು ಬನಶಂಕರಿ ದೇವಾಲಯದಲ್ಲಿ 83.64 ಕೋಟಿ ಸೇರಿದಂತೆ ವಿವಿಧ ದೇವಾಲಯಗಳು ಸೇರಿದಂತೆ ಒಟ್ಟು ಬರೋಬ್ಬರಿ 25 ಕೋಟಿ ಕಾಣಿಕೆ ಸಂಗ್ರಹವಾಗಿದೆ ಎಂದು ಹೇಳಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ಆದಾಯದಲ್ಲಿ ಭಾರೀ ಏರಿಕೆ ಕಂಡಿದೆ ಎಂದು ಹೇಳಲಾಗಿದೆ.