ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಬಡವರಿಗೆ 10 ಕೆಜಿ ಅಕ್ಕಿ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಆಹಾರ ನಿಗಮ ಅಕ್ಕಿ ನೀಡಲು ನಿರಾಕರಿಸಿದ್ದರೂ ಕೇಂದ್ರದ ಎನ್.ಸಿ.ಎಫ್., ನಾಫೆಡ್ ನಿಂದ ಹೆಚ್ಚುವರಿ ಅಕ್ಕಿ ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ತಕ್ಷಣಕ್ಕೆ ಹೆಚ್ಚುವರಿ ಅಕ್ಕಿ ಲಭ್ಯವಾಗದಿದ್ದಲ್ಲಿ ರಾಗಿ, ಜೋಳ ವಿತರಿಸುವ ಚಿಂತನೆ ಇದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಆರು ತಿಂಗಳವರೆಗೆ ರಾಗಿ, ಜೋಳ ಕೊಡುವಷ್ಟು ದಾಸ್ತಾನು ಲಭ್ಯವಿದ್ದು, ಮೈಸೂರು ಭಾಗದ ಪಡಿತರ ಚೀಟಿದಾರರಿಗೆ ಎರಡು ಕೆಜಿ ರಾಗಿ, ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ 2 ಕೆಜಿ ಜೋಳ ನೀಡಬಹುದು. ಉಳಿದ ಮೂರು ಕೆಜಿ ಅಕ್ಕಿ ಸೇರಿ ಒಟ್ಟು 10 ಕೆಜಿ ಆಹಾರ ಧಾನ್ಯ ನೀಡುವ ಚಿಂತನೆ ಇದೆ ಎಂದು ಹೇಳಿದ್ದಾರೆ.