ಬೆಂಗಳೂರು : ಯಲಹಂಕ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ರಾಜ್ಯದ ಪ್ರಪ್ರಥಮ 370 ಮೆಗಾವ್ಯಾಟ್ ಸಾಮರ್ಥ್ಯದ ನೈಸರ್ಗಿಕ ಅನಿಲ ಆಧಾರಿತ ಯಲಹಂಕ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ 5 ಗಂಟೆಗೆ ಲೋಕಾರ್ಪಣೆ ಮಾಡಲಿದ್ದಾರೆ. ಈ ಘಟಕವು ವಿಶ್ಚಾಸಾರ್ಹ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಯ ಖಾತ್ರಿಗಾಗಿ ರಾಜ್ಯದ ಪವರ್ ಗ್ರಿಡ್ಗೆ ಸೇರ್ಪಡೆಯಾಗಲಿದೆ.
ಘಟಕದ ವೈಶಿಷ್ಟ್ಯತೆಗಳು
• 370 ಮೆಗಾವ್ಯಾಟ್ ಘಟಕದ ಸಾಮರ್ಥ್ಯ
• ₹2,500 ಯೋಜನಾ ವೆಚ್ಚ
• 237 ಮೆಗಾವ್ಯಾಟ್ ಗ್ಯಾಸ್ ಟರ್ಬೈನ್
• 2755 2. ವಾರ್ಷಿಕ ವಿದ್ಯುತ್ ಉತ್ಪಾದನೆ
• 133 ಮೆಗಾವ್ಯಾಟ್ ಸ್ಟೀಮ್ ಟರ್ಬೈನ್