alex Certify BIG NEWS : ಕೋಲಾರದಲ್ಲಿ ‘CM ಸಿದ್ದರಾಮಯ್ಯ’ ಪ್ರಗತಿ ಪರಿಶೀಲನಾ ಸಭೆ : ಅಧಿಕಾರಿಗಳಿಗೆ ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಕೋಲಾರದಲ್ಲಿ ‘CM ಸಿದ್ದರಾಮಯ್ಯ’ ಪ್ರಗತಿ ಪರಿಶೀಲನಾ ಸಭೆ : ಅಧಿಕಾರಿಗಳಿಗೆ ಮಹತ್ವದ ಸೂಚನೆ

ಕೋಲಾರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ಅಪ್ರಾಪ್ತ ಹೆಣ್ಣುಮಕ್ಕಳ ಮದುವೆ, ಭ್ರೂಣಹತ್ಯೆ ತಪ್ಪಿಸಬೇಕು. ಕೋಲಾರದಲ್ಲಿ ಈ ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವೇನು? ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಜಿಲ್ಲೆಯ ಅಧಿಕಾರಿಗಳ ಕರ್ತವ್ಯ. ಮುಂದೆ ಇಂಥವು ಮರುಕಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಖಚಿತ ಎಂದರು.

ಜಿಲ್ಲಾಧಿಕಾರಿಗಳ ಮತ್ತು ತಹಶೀಲ್ದಾರ್ಗಳ ಖಾತೆಯಲ್ಲಿ ಬರ ನಿರ್ವಹಣೆಗೆ ಅಗತ್ಯವಾದ ಹಣ ಇದೆ. ಜನ-ಜಾನವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಮೇವಿಗೆ ತೊಂದರೆ ಇಲ್ಲ . ಮುಂದಿನ ಹಲವು ವಾರಗಳಿಗೆ ಆಗುವಷ್ಟು ಮೇವು ಸಂಗ್ರಹ ಇದೆ. ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಸೃಷ್ಟಿ ಬಗ್ಗೆ ಆದ್ಯತೆ ನೀಡಬೇಕು.ನರೇಗಾ ಉದ್ಯೋಗ 100 ರಿಂದ 150 ದಿನಗಳಿಗೆ ಹೆಚ್ಚಿಸಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಇನ್ನೂ ಕೇಂದ್ರದಿಂದ ಒಪ್ಪಿಗೆ ಸಿಕ್ಕಿಲ್ಲ ಎಂದರು.

ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ಆಗುವವರೆಗೂ ರೈತರಿಗೆ 2 ಸಾವಿರ ತಕ್ಷಣಕ್ಕೆ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದೇನೆ. ಸಣ್ಣ ಪುಟ್ಟ ಸಮಸ್ಯೆಗಳಿಗೂ ಕೋಲಾರದ ಜನ ನನ್ನ ಬಳಿಗೆ ಬಂದರೆ ಇಲ್ಲಿ ಜಿಲ್ಲಾಡಳಿತ ವಿಫಲ ಎಂದೇ ಪರಿಗಣಿಸಬೇಕಾಗುತ್ತದೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಜನರ ಹಣದಲ್ಲಿ ಅಧಿಕಾರಿಗಳಿಗೆ ಸವಲತ್ತುಗಳು ಸಿಗುತ್ತಿವೆ. ಆದ್ದರಿಂದ ನಾವು ಜನರ ಪರವಾಗಿರಬೇಕು. ರೈತರನ್ನು ಪೊಲೀಸ್ ಮತ್ತು ಇತರೆ ಇಲಾಖೆ ಅಧಿಕಾರಿಗಳು ಸತಾಯಿಸಬಾರದು. ಇದನ್ನು ನಾನು ಸಹಿಸಲ್ಲ. ಇದನ್ನು ಎಸ್.ಪಿ ಗಳು ಗಮನಿಸಬೇಕು. ಎಸ್.ಪಿ ಗಳು ಠಾಣೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೋಲಾರ ಜಿಲ್ಲೆ ಪ್ರಗತಿ ಸಾಧಿಸಬೇಕು. ಆರೋಗ್ಯ ಮತ್ತು ಶಿಕ್ಷಣದಲ್ಲಿ ಮುಂದಿರಬೇಕು. ಮಕ್ಕಳಲ್ಲಿ ಅನಿಮೀಯ, ರಕ್ತ ಹೀನತೆ 0.6℅ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಏನು ಕ್ರಮ ಕೈಗೊಳ್ಳಲಾಗಿದೆ? ಅನಿಮಿಯ ಮುಕ್ತ ಕರ್ನಾಟಕ ನಮ್ಮ ಸರ್ಕಾರದ ಮಹತ್ವದ ಕಾರ್ಯಕ್ರಮ. ಇದನ್ನು ಪರಿಣಾಮಕರಿಯಾಗಿ ಜಾರಿ ಮಾಡಬೇಕು ಎಂದರು.

ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಲ್ಲಿ ನಾವು ಊಟ ಕೊಡುತ್ತಿದ್ದೇವೆ. ಆದರೂ ರಕ್ತಹೀನತೆ ಪ್ರಮಾಣ 0.6℅ ಹೆಚ್ಚಾಗಿದ್ದು ಏಕೆ ಎಂದು ಪರಿಶೀಲಿಸಿ, ತಕ್ಷಣ ಪರಿಹಾರ ಮಾಡಬೇಕು.31 ಜಿಲ್ಲೆಗಳಲ್ಲಿ ತಲಾ ಆದಾಯದಲ್ಲಿ ಕೋಲಾರ 19ನೇ ಸ್ಥಾನದಲ್ಲಿದೆ ಏಕೆ? ಜಿಲ್ಲಾ ಮಟ್ಟದ ಅಧಿಕಾರಿಗಳೇ ಹೊಣೆಯಾಗಿದ್ದು, ಮುಂದಿನ ಸಭೆಗಳಲ್ಲಿ ಇದೆಲ್ಲಾ ಸುಧಾರಿಸಿರಬೇಕು.ಸ್ಮಶಾನ ಮತ್ತು ಖಬರಸ್ತಾನಕ್ಕೆ ಅಗತ್ಯ ಜಾಗಗಳನ್ನು ಒದಗಿಸಬೇಕು. ಸರ್ಕಾರಿ ಸ್ಥಳ ಇಲ್ಲದಿದ್ದರೆ ಖರೀದಿಸಿ ಕೊಡಬೇಕು. ದಲಿತರು ಸೇರಿದಂತೆ ಯಾವುದೇ ಸಮುದಾಯ, ಧರ್ಮದವರಿಗೂ ಶವ ಸಂಸ್ಕಾರಕ್ಕೆ ತೊಂದರೆ ಆಗಕೂಡದು ಎಂದು ಸೂಚನೆ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...