ಬೆಂಗಳೂರು : ಸಿಎಂ ಸಿದ್ದರಾಮಯ್ಯ ಜೀವನಾಧಾರಿತ ಚಿತ್ರ ‘ಲೀಡರ್ ರಾಮಯ್ಯ’ ಶೂಟಿಂಗ್ ಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.
ಮುಡಾ ಹಗರಣ ಸಂಬಂಧ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆ , ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐ ಆರ್ ದಾಖಲಾದ ಹಿನ್ನೆಲೆ ಜೀವನಾಧಾರಿತ ಚಿತ್ರ ‘ಲೀಡರ್ ರಾಮಯ್ಯ’ ಶೂಟಿಂಗ್ ಗೆ ಚಿತ್ರತಂಡ ತಾತ್ಕಾಲಿಕ ಬ್ರೇಕ್ ಹಾಕಿದೆ. ಸದ್ಯ ಸಿನಿಮಾದ ಶೂಟಿಂಗ್ ಸ್ಥಗಿತಗೊಳಿಸಿದೆ.
ಸಿದ್ದರಾಮಯ್ಯ ಅವರ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸುತ್ತಿದ್ದು, ಸದ್ಯ ಚಿತ್ರತಂಡ ಸಿದ್ದರಾಮಯ್ಯರ ಬಾಲ್ಯ ಜೀವನ, ಶಿಕ್ಷಣದ ಬಗ್ಗೆ ಶೂಟಿಂಗ್ ಮುಗಿಸಿದೆ.