ಬೆಂಗಳೂರು : ಇಂದು ಬಣ್ಣಗಳ ಹಬ್ಬ ಹೋಳಿ ಹಬ್ಬದ ಸಂಭ್ರಮ. ದೇಶಾದ್ಯಂತ ಇಂದು ಜನರು ಬಹಳ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸುತ್ತಿದ್ದಾರೆ.
ಇದೀಗ ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ. ಸಂಭ್ರಮದ ಹೋಳಿ ತಮ್ಮೆಲ್ಲರ ಬದುಕಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ತುಂಬಲಿ. ವಿವಿಧ ಜಾತಿ, ಧರ್ಮ, ಸಂಸ್ಕೃತಿಗಳ ಜನರು ತಮ್ಮ ನಡುವಿನ ವೈರುಧ್ಯಗಳನ್ನು ಮೀರಿ ಹೋಳಿಯ ಬಣ್ಣಗಳಂತೆ ಮಿಳಿತಗೊಳ್ಳಲಿ. ದ್ವೇಷ ಅಳಿದು ಸ್ನೇಹ, ಸೌಹಾರ್ದತೆಯ ಬಣ್ಣಗಳು ಎಲ್ಲರ ಬದುಕನ್ನಾವರಿಸಲಿ ಎಂದು ಹಾರೈಸುತ್ತೇನೆ. ನಾಡಬಾಂಧವರಿಗೆ ಹೋಳಿ ಹುಣ್ಣಿಮೆಯ ಶುಭಾಶಯಗಳು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.