ಬೆಂಗಳೂರು : ನಾಡಿನ ಸಮಸ್ತ ಜನತೆಗೆ ಸಿಎಂ ಸಿದ್ದರಾಮಯ್ಯ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.
ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ದುಃಖದ ಕಹಿಬೇವು, ಸಂತಸದ ಸಿಹಿಬೆಲ್ಲ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ, ಭರವಸೆಯೊಂದಿಗೆ ಮುನ್ನಡೆಯಬೇಕು ಎನ್ನುವುದೇ ಯುಗಾದಿಯ ಜೀವನ ಸಂದೇಶ. ಯುಗ ಪರಿವರ್ತನೆಯ ಸಂದೇಶದ ಯುಗಾದಿ ಹಬ್ಬ ನಾವೆಲ್ಲ ಬಯಸುವ ಬದಲಾವಣೆಯನ್ನು ಹೊತ್ತು ತರಲಿ. ಸಮಸ್ತ ಜನರ ಬಾಳಲ್ಲಿ ಹೊಸ ಉತ್ಸಾಹ, ಹೊಸ ಚಿಂತನೆ, ಹೊಸ ಭರವಸೆಗಳನ್ನು ತುಂಬಲಿ. ಬೆಲ್ಲದಂತ ಸುಖ – ಸಮೃದ್ಧಿ ಮಾತ್ರವೇ ನಿಮ್ಮೆಲ್ಲರ ಬದುಕಲ್ಲಿ ತುಂಬಿರಲಿ ಎಂದು ಹಾರೈಸುತ್ತೇನೆ. ನಾಡಬಾಂಧವರಿಗೆ ಯುಗಾದಿಯ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.