alex Certify ರಾಜ್ಯದ ಜನತೆಗೆ ನಾಡಹಬ್ಬ ದಸರಾ ಶುಭಾಶಯ ಕೋರಿದ CM ಸಿದ್ದರಾಮಯ್ಯ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಜನತೆಗೆ ನಾಡಹಬ್ಬ ದಸರಾ ಶುಭಾಶಯ ಕೋರಿದ CM ಸಿದ್ದರಾಮಯ್ಯ.!

ಬೆಂಗಳೂರು : ಧರ್ಮ, ಸಂಸ್ಕೃತಿ, ಸಾಹಿತ್ಯ, ಕಲೆ, ಕ್ರೀಡೆ ಮೊದಲಾದ ಎಲ್ಲ ಕ್ಷೇತ್ರಗಳನ್ನು ಮೇಳೈಸಿಕೊಂಡು ಆಚರಿಸಲಾಗುವ ಮೈಸೂರು ದಸರಾ ನಮ್ಮ ನಿಜವಾದ ನಾಡಹಬ್ಬ..! ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಎಂದು ಸಿಎಂ ಸಿದ್ದರಾಮಯ್ಯ ಶುಭ ಕೋರಿದ್ದಾರೆ.

ಈ ಹಬ್ಬ ಅಸತ್ಯ, ಅನ್ಯಾಯ, ದ್ವೇಷ, ಮೋಸಗಳ ಕೆಡುಕತನದ ವಿರುದ್ಧ ಸಾಧಿಸಿದ್ದ ವಿಜಯದ ಸಂಕೇತವೂ ಹೌದು. ಈ ಬಾರಿ ಪ್ರಕೃತಿ ದೇವತೆ ಒಲಿದು ಹರಸಿದ್ದರ ಫಲವಾಗಿ ಇಳೆ ತುಂಬಾ ಸಮೃದ್ಧ ಮಳೆಯಾಗಿ, ಬೆಳೆಯಾಗಿ ನಾಡಿನಾದ್ಯಂತ ಹರ್ಷದ ಹೊನಲು ಹರಿದಿದೆ.

ಈ ಹಿನ್ನೆಲೆಯಲ್ಲಿ ದಸರಾ ಹಬ್ಬವನ್ನು ಈ ಬಾರಿ ಸಕಲ ಸಂಪ್ರದಾಯಗಳನ್ನು ಮೇಳೈಸಿಕೊಂಡು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ನಾಡಹಬ್ಬದ ಸಂಭ್ರಮಾಚರಣೆಯಲ್ಲಿ ತಾವೆಲ್ಲರೂ ಪಾಲ್ಗೊಂಡು ಹಬ್ಬದ ವೈಭವವನ್ನು ಕಣ್ಣುಂಬಿಕೊಳ್ಳಲು ನಿಮ್ಮೆಲ್ಲರನ್ನು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾದ ಹಾರ್ದಿಕ ಶುಭಾಶಯಗಳು ಎಂದು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...