ಕೊಪ್ಪಳ : ತುಂಗಭದ್ರಾ ಡ್ಯಾಂನ ಕ್ರಸ್ಟ್ ಗೇಟ್ ಮುರಿದು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದ ಹಿನ್ನೆಲೆ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ 9ನೇ ಕ್ರಸ್ಟ್ ಗೇಟ್ ಚೈನ್ ಕಟ್ಟಾಗಿದ್ದರಿಂದ ಸಮಸ್ಯೆಯಾಗಿದೆ. ಈಗ ಗೇಟ್ ರಿಪೇರಿ ಮಾಡೋದಕ್ಕೆ ಸುಮಾರು 60 ಟಿಎಂಸಿನಷ್ಟು ನೀರನ್ನ ಹೊರಗೆ ಬಿಡಬೇಕು. ಅಕ್ಟೋಬರ್ ವರೆಗೆ ಮಳೆ ಬರುವುದರಿಂದ ಈಗ ಹೊರಗೆ ಹೋದಷ್ಟು ನೀರು ತುಂಬುವ ಸಾಧ್ಯತೆ ಇದೆ ಎಂದರು.
ಈಗ ಮುರಿದು ಹೋಗಿರುವ ಕ್ರಸ್ಟ್ ಗೇಟ್ ರಿಪೇರಿ ಮಾಡಬೇಕು ನೀರು ಹೊರಕ್ಕೆ ಬಿಡಬೇಕು. ಇದರಿಂದ ರೈತರಿಗೆ ಮೊದಲ ಬೆಳೆಗೆ ಯಾವುದೇ ತೊಂದರೆ ಆಗಲ್ಲ ಎಂದರು. ನಮ್ಮದು ರೈತಪರ ಸರ್ಕಾರ, ರೈತರಿಗೆ ತೊಂದರೆಯಾಗುವುದಕ್ಕೆ ಬಿಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.