ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತವರು ಕ್ಷೇತ್ರ ವರುಣಾಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ. 313 ಕಾಮಗಾರಿ, ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಸ್ವಕ್ಷೇತ್ರ ವರುಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರುತ್ತಿರುವ ಕಾಮಗಾರಿಗಳ ಮಾಹಿತಿ
ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ಹಾಗೂ ಚೆಕ್ ಡ್ಯಾಂ, ತಡೆಗೋಡೆ ನಿರ್ಮಾಣ ಕಾಮಗಾರಿಗಳು – 39.1 ಕೋಟಿ ರೂ.
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಸಮುದಾಯ ಭವನಗಳು – 58 ಲಕ್ಷ ರೂ.
ಸಮಾಜ ಕಲ್ಯಾಣ ಇಲಾಖೆ ಸಮುದಾಯ ಭವನಗಳು – 3.2 ಕೋಟಿ ರೂ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಮುದಾಯ ಭವನಗಳು – 1.3 ಕೋಟಿ ರೂ.
ವೈಯಕ್ತಿಕ ಫಲಾನುಭವಿಗಳಿಗೆ 342 ದನದ ಕೊಟ್ಟಿಗೆ, 10 ಕುರಿ ಶೆಡ್, 1,257 ವಸತಿ ಕಾಮಗಾರಿ – 4.5 ಕೋಟಿ ರೂ.
ಸಮಗ್ರ ತೋಟಗಾರಿಕಾ ಅಭಿವೃದ್ಧಿ, ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆ, ಮಧುವನ ಮತ್ತು ಜೇನು ಸಾಕಾಣೆ ಅಭಿವೃದ್ಧಿ – 18 ಕೋಟಿ ರೂ.
ಸಾವಯವ ಇಂಗಾಲ ಹೆಚ್ಚಿಸುವಿಕೆ, ಬಿತ್ತನೆ ಬೀಜಗಳ ಪೂರೈಕೆ, ಕೃಷಿ ಯಾಂತ್ರೀಕರಣ, ಕೃಷಿ ಭಾಗ್ಯ, ಕೃಷಿ ಸಂಸ್ಕರಣೆ, ಕೃಷಿ ಸಂಚಾಯಿ ಯೋಜನೆಗಳು – 9.7 ಕೋಟಿ ರೂ.
ಅನುಗ್ರಹ ಯೋಜನೆ (ಕುರಿ ಮತ್ತು ಮೇಕೆ ಸಾವಿಗೆ ಪರಿಹಾರ) ಮತ್ತು ಕಾಮಧೇನು ಆಪತ್ತು ನಿಧಿ, 8,941 ಮೇವಿನ ಬೀಜಗಳ ವಿತರಣೆ – 38 ಲಕ್ಷ ರೂ.
ಶ್ರಮಶಕ್ತಿ ಯೋಜನೆ, ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಅರಿವು ಯೋಜನೆ, ಗಂಗಾ ಕಲ್ಯಾಣ ಯೋಜನೆ – 2.2 ಕೋಟಿ ರೂ.
ಬಸವ ವಸತಿ ಯೋಜನೆಯಡಿ 2,310 ಹಾಗೂ ಅಂಬೇಡ್ಕರ್ ನಿವಾಸ್ ಯೋಜನೆಯಡಿ 2,509 ಮನೆಗಳು ಮಂಜೂರಾಗಿದೆ.
ಸಮುದಾಯ ಬಂಡವಾಳ ನಿಧಿ ಪಡೆದಿರುವ ಸ್ವ-ಸಹಾಯ ಗುಂಪುಗಳ ಸಂಖ್ಯೆ – 52.8 ಕೋಟಿ ರೂ.
ಹಿಪ್ಪುನೇರಳೆಗೆ ಸಹಾಯಧನ ಮತ್ತು ಹನಿ ನೀರಾವರಿ, ಹಿಪ್ಪುನೇರಳೆ ಶೆಡ್ ನಿರ್ಮಾಣ
ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ ಯೋಜನೆ ಹಾಗೂ ಹೊಲಿಗೆ ಯಂತ್ರ ವಿತರಣೆ – 55 ಲಕ್ಷ ರೂ.
ಮೀನುಗಾರರ ಸಹಕಾರ ಸಂಘಕ್ಕೆ ಸಹಾಯಧನ, ಮೀನುಗಾರರಿಗೆ ಮೀನುಗಾರಿಕೆ ಕಿಟ್‌ಗಳ ವಿತರಣೆ – 3 ಲಕ್ಷ ರೂ.
ವಿದ್ಯುತ್ ಶುಲ್ಕ ಮನ್ನಾ – 23.3 ಕೋಟಿ ರೂ.
ಶಾಲಾ ಅಭಿವೃದ್ಧಿ ಕಾಮಗಾರಿಗಳಲ್ಲಿ 22 ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ, 15 ಶೌಚಾಲಯಗಳ ನಿರ್ಮಾಣ, 14 ಆಟದ ಮೈದಾನಗಳ ಅಭಿವೃದ್ಧಿ ಮತ್ತು 4 ಶಾಲೆಗಳಿಗೆ ಅಡುಗೆ ಕೋಣೆ ನಿರ್ಮಾಣ – 3.2 ಕೋಟಿ ರೂ.
ಕೆರೆ ಅಭಿವೃದ್ಧಿ ಕಾಮಗಾರಿಗಳು – 2.8 ಕೋಟಿ ರೂ.
ರಸ್ತೆ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಳು -227 ಕೋಟಿ ರೂ.
ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ – 72 ಕೋಟಿ ರೂ.
ಸಿಸಿ ರಸ್ತೆ ಮತ್ತು ಚರಂಡಿ ಹಾಗೂ ಡಕ್ ನಿರ್ಮಾಣ ಕಾಮಗಾರಿಗಳು – 125 ಕೋಟಿ ರೂ.
ಶಾಲಾ ಕಟ್ಟಡ ಕಾಮಗಾರಿಗಳು -1.08 ಕೋಟಿ ರೂ.
ಭಾಗ್ಯ ಜ್ಯೋತಿ ಸ್ಥಾವರಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆ -67.8 ಕೋಟಿ ರೂ.