ಮೈಸೂರು: ಶಿಕ್ಷಣ ದೊರಕದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ ನಡೆದ ಸುತ್ತೂರು ಜಾತ್ರೆಯಲ್ಲಿ ಮಾತನಾಡಿದ ಅವರು, ಸಂವಿಧಾನ ಮತ್ತು ಶಿಕ್ಷಣದಿಂದ ನಾನು ಮುಖ್ಯಮಂತ್ರಿಯಾದೆ. ಕೆಲವು ಪಟ್ಟಭದ್ರ ಶಕ್ತಿಗಳಿಂದ ಸಂವಿಧಾನ ಬದಲಾಯಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಜ್ಞಾನ ತಮ್ಮದೇ ಸ್ವತ್ತು ಎಂದುಕೊಂಡಿದ್ದರು. ಆದರೆ ಜ್ಞಾನ ಎಲ್ಲರ ಸ್ವತ್ತು. ಜಾತಿಗೆ ನೇತು ಹಾಕಿಕೊಂಡು ಇರಬಾರದು. ಯಾವುದೋ ಜಾತಿಯಲ್ಲಿ ಜನಿಸುವುದು ಶ್ರೇಷ್ಠತೆಯಲ್ಲ, ಇಂದಿಗೂ ಮೇಲ್ವರ್ಗ, ಕೆಳವರ್ಗ ಇದೆ. ಸಮಾನತೆ ಇನ್ನೂ ಬಂದಿಲ್ಲ. ಆರ್ಥಿಕ, ಸಾಮಾಜಿಕ ಶಕ್ತಿ ಬಂದಾಗ ಸ್ವಾತಂತ್ರ್ಯ ಬಂದಿದ್ದು ಸಾರ್ಥಕವಾಗುತ್ತದೆ ಎಂದು ಹೇಳಿದ್ದಾರೆ.
ಎಲ್ಲರಿಗೂ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಸಿಗಬೇಕು. ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿದ್ದರು. ಹಾಗೆಯೇ ಇಲ್ಲಿ ಕುಳಿತಿದ್ದೇವೆ. ಜಿಲ್ಲಾಧಿಕಾರಿ ಒಕ್ಕಲಿಗರಿದ್ದಾರೆ. ನಾನು ಕುರುಬ ಇಲ್ಲಿ ಕುಳಿತಿದ್ದೇನೆ. ದಲಿತರು, ಕ್ರೈಸ್ತರು ಎಲ್ಲರೂ ಒಟ್ಟಿಗೆ ಕೂರುವ ಕೆಲಸವಾಗಬೇಕು ಎಂದು ಸಿಎಂ ಹೇಳಿದ್ದಾರೆ.