ದಾವಣಗೆರೆ : ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯದ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಕೊಡಬೇಕು ಎಂಬುದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೇಡಿಕೆಯಾಗಿದ್ದು, ಈ ಬಾರಿಯ ಬಜೆಟ್‍ನಲ್ಲಿ ಅದರ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿ ಸೂಕ್ತವಾದ, ಅನುಕೂಲವಾದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು ಈಗಾಗಲೇ ನಿವೃತ್ತ ಪತ್ರಕರ್ತರ ಮಾಸಾಶನವನ್ನು 10 ರಿಂದ 12 ಸಾವಿರಕ್ಕೆ ಮತ್ತು ಅವರ ಕುಟುಂಬದವರ ಪಿಂಚಣಿಯನ್ನು 3 ರಿಂದ 6 ಸಾವಿರಕ್ಕೆ ಏರಿಕೆ ಮಾಡಲಾಗಿದೆ ಎಂದರು.
ಮಾಧ್ಯಮಗಳು ಯಾವುದೇ ಕಾರಣಕ್ಕೂ ಮೌಢ್ಯ, ಕಂದಾಚಾರ, ಕರ್ಮಸಿದ್ದಾಂತವನ್ನು ಪೆÇೀಷಿಸುವ ಕೆಲಸ ಮಾಡಬಾರದು. ಜನರಿಗೆ ಸತ್ಯ ಹೇಳಬೇಕು, ದನಿ ಇಲ್ಲದ ಜನರಿಗೆ ದನಿ ನೀಡುವ ಕೆಲಸ ಮಾಡಬೇಕು. ಪತ್ರಿಕೋದ್ಯಮದ ಬೆಳವಣಿಗೆಗೆ ತಂತ್ರಜ್ಞಾನ, ವಿಜ್ಞಾನ ಬೆಳವಣೆಗೆಯಾಗಿದೆ. ಆದರೂ ಪತ್ರಿಕೋದ್ಯಮ ಉದ್ದೇಶ ಸಫಲವಾಗಬೇಕಾದರೆ ಸುದ್ದಿಯು ಸತ್ಯನಿμÉ್ಠಯಿಂದ ಕೂಡಿರಬೇಕು. ನಾವು ಮಾಧ್ಯಮದಿಂದ ಸಮಾಜದಲ್ಲಿ ಯಾವ ಬದಲಾವಣೆ ನಿರೀಕ್ಷೆ ಮಾಡಿದ್ದೇವೆಯೋ ಆ ಬದಲಾವಣೆಗೆ ಯಾವುದೇ ಧಕ್ಕೆಯಾಗಬಾರದು ಎಂದು ಹೇಳಿದರು.