
ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಯುನೈಟೆಡ್ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಐರನ್ ಲೇಡಿ ಆಫ್ ಇಂಡಿಯಾ ಖ್ಯಾತಿಯ ಖುದ್ಸಿಯಾ ನಜಿರ್ ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಅಭಿನಂದಿಸಿದ್ದಾರೆ.
ಬಂಗಾರಪೇಟೆ ಮೂಲದ ಕೆಎಸ್‌ಆರ್‌ಟಿಸಿ ನೌಕರರಾಗಿರುವ ಖುದ್ಸಿಯಾ ಅವರ ಸಾಧನೆ ಮತ್ತಷ್ಟು ಜನರಿಗೆ ಪ್ರೇರಣೆಯಾಗಲಿ. ಅವರ ಕ್ರೀಡಾ ಬದುಕು ಮತ್ತಷ್ಟು ಸಾಧನೆಗಳಿಂದ ಕೂಡಿರಲಿ ಎಂದು ಶುಭ ಹಾರೈಸಿದ್ದಾರೆ.