ಬೆಂಗಳೂರು : ತಮ್ಮ ಸುಪುತ್ರನಿಗೆ ಟಿಕೆಟ್ ಕೊಟ್ಟು ಸೋತು ಹೋದರೆ ಸಿಎಂ ಕುರ್ಚಿಗೇ ಕುತ್ತು ಬರಬಹುದು ಎಂದು ಜಾಣತನದಿಂದ ಮಗನನ್ನು ಲೋಕಸಭಾ ಚುನಾವಣೆಯಿಂದ ದೂರವಿಟ್ಟಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಕ್ಕಳನ್ನು ಗೆಲ್ಲಿಸಿಕೊಂಡು ಬರದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಕಾಂಗ್ರೆಸ್ ಹೈಕಮಾಂಡ್ ಹುಕುಂ ಬಗ್ಗೆ ಮೊದಲೇ ಮುಂದಾಲೋಚನೆ ಮಾಡಿರುವ ಸಿಎಂ ಸಿದ್ದರಾಮಯ್ಯನವರು ತಮ್ಮ ಸುಪುತ್ರನಿಗೆ ಟಿಕೆಟ್ ಕೊಟ್ಟು ಸೋತು ಹೋದರೆ ಸಿಎಂ ಕುರ್ಚಿಗೇ ಕುತ್ತು ಬರಬಹುದು ಎಂದು ಜಾಣತನದಿಂದ ಮಗನನ್ನು ಲೋಕಸಭಾ ಚುನಾವಣೆಯಿಂದ ದೂರವಿಟ್ಟಿದ್ದಾರೆ. ಸಚಿವರ ಮಕ್ಕಳಿಗೆ ಲೋಕಸಭಾ ಚುನಾವಣೆ ಟಿಕೆಟ್ ನೀಡಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಜಾಣತನ ಪ್ರದರ್ಶನ ಮಾಡುತ್ತಿರುವ ಸಿದ್ದರಾಮಯ್ಯನವರು ಇಂತಹ ತಂತ್ರಗಾರಿಕೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಇತರೆ ಮೂಲ ಕಾಂಗ್ರೆಸ್ಸಿಗರಿಗಿಂತ ಖಂಡಿತ ಸ್ಟ್ರಾಂಗ್ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.