ಬೆಂಗಳೂರು : ಕನ್ನಡಿಗರು ಬೆವರು ಸುರಿಸಿ ಕಟ್ಟಿದ ಹಣ ಕಂಡವರ ಪಾಲಾಗಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ‘ಕೇಂದ್ರ ಬಿಜೆಪಿ ಸರ್ಕಾರವು ಕರ್ನಾಟಕದ ತೆರಿಗೆ ಪಾಲನ್ನು ಕಡಿತಮಾಡಿ, ಆ ಅನುದಾನವನ್ನು ಗುಜರಾತ್ ಅಭಿವೃದ್ಧಿಗೆ ನೀಡಿದೆ. ತೆರಿಗೆ ಕಟ್ಟುವುದು ದಕ್ಷಿಣದ ರಾಜ್ಯಗಳು, ಭರಪೂರ ಅನುದಾನ ಬಾಚಿಕೊಳ್ಳುವುದು ಉತ್ತರದ ರಾಜ್ಯಗಳು. ಪ್ರಧಾನಿ ಮೋದಿ ಅವರೇ, ಇದೇನಾ ನಿಮ್ಮ ಗುಜರಾತ್ ಮಾಡೆಲ್? ಇಂಥ ಹುಸಿ ಮಾಡೆಲ್ ನಿಂದ ಕನ್ನಡಿಗರು ಕಲಿಯುವುದೇನಿದೆ? ಎಂದು ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.