ಮೈಸೂರು: ‘ನಷ್ಟ ತುಂಬಿಕೊಡಿ’ ಎಂಬ ಖಾಸಗಿ ಸಾರಿಗೆಯವರ ಬೇಡಿಕೆ ಈಡೇರಿಸಲು ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಖಾಸಗಿ ಸಾರಿಗೆ ಒಕ್ಕೂಟ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೆಂಗಳೂರು ಬಂದ್ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು. ಬಂದ್ ಮಾಡಲು ಎಲ್ಲರಿಗೂ ಹಕ್ಕಿದೆ. ನಾವು ಮಹಿಳೆಯರಿಗಾಗಿ ಉಚಿತ ಪ್ರಯಾಣ ಯೋಜನೆ ಜಾರಿಗೆ ತಂದಿದ್ದೇವೆ, ಆದರೆ ಖಾಸಗಿ ಬಸ್ನವರು ಇದರಿಂದ ನಷ್ಟ ಆಗಿದೆ ಎನ್ನುತ್ತಿದ್ದಾರೆ. ಖಾಸಗಿ ಸಾರಿಗೆಯವರು ನಷ್ಟ ತುಂಬಿಕೊಡಿ ಎಂಬ ಬೇಡಿಕೆ ಇದೆ. ಆದ್ರೆ ಇದನ್ನು ಈಡೇರಿಸಲು ಆಗುವುದಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಮಹಿಳೆಯರಿಗಾಗಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಿಕೊಟ್ಟಿದ್ದೇವೆ, ನಮಗೂ ಕೊಡಿ ಎಂದರೆ ನಾವು ಏನು ಮಾಡುವುದು. ನಷ್ಟ ತುಂಬಿಕೊಡಿ’ ಎಂಬ ಖಾಸಗಿ ಸಾರಿಗೆಯವರ ಬೇಡಿಕೆ ಈಡೇರಿಸಲು ಖಂಡಿತ ಆಗುವುದಿಲ್ಲ ಸಿಎಂ ಸಿದ್ದರಾಮಯ್ಯ ಖಡಕ್ ಆಗಿ ಹೇಳಿದ್ದಾರೆ.
ಇನ್ನೂ. ಬೆಂಗಳೂರು ಬಂದ್ ರಾಜಕೀಯ ಪ್ರೇರಿತ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು ನಗರದ ಹಲವು ಕಡೆ ಪ್ರತಿಭಟನೆ ಜೋರಾಗಿದ್ದು, ರಾಜ್ಯ ಸರ್ಕಾರ ಈ ಕೂಡಲೇ ನಮ್ಮ ಮನವಿಯನ್ನು ಪರಿಗಣಿಸಿ ನಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಆಟೋ ನಿಲ್ಲಿಸಿ, ಆಟೋ ಪಂಕ್ಚರ್ ಮಾಡಲಾಗಿದೆ. ಅಲ್ಲದೇ ಕೆಲವು ಕಡೆ ಆಟೋ ಚಾಲಕರ ಮೇಲೂ ಕೂಡ ಹಲ್ಲೆ ನಡೆಸಲಾಗಿದೆ.