ಬೆಂಗಳೂರು: ಸಾಮಾಜಿಕ ಹಾಗೂ ಆರ್ಥಿಕ ತಾರತಮ್ಯ ನಿವಾರಣೆಗಾಗಿ ಜಾತಿಗಣತಿ ವರದಿಯನ್ನು ಸ್ವೀಕರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಾಗಿನೆಲೆ ಮಹಾಸಂಸ್ಥಾನ ಮಠದಲ್ಲಿ ಮಾತನಾಡಿದ ಸಿದ್ದರಾಮಯ್ಯ ಮತ್ತೆ ಜಾತಿಗಣತಿ ಮಂತ್ರ ಪಠಿಸಿದ್ದು, ಅಂದು ಸಮ್ಮಿಶ್ರ ಸರ್ಕಾರ ಇದ್ದಾಗ ಜಾತಿಗಣತಿ ಸರ್ವೆ ಸಂಪೂರ್ಣವಾಗಿ ರೆಡಿ ಕೂಡ ಇತ್ತು. ಸಮ್ಮಿಶ್ರ ಸರ್ಕಾರದಲ್ಲಿ ಪುಟ್ಟರಂಗಶೆಟ್ಟಿ ಸಚಿವರಾಗಿದ್ದರು. ಹಿಂದುಳಿದ ವರ್ಗಗಳ ಇಲಾಖೆ ವರದಿ ಪಡೆಯಲು ನಾನು ಸಚಿವರಿಗೆ ಹೇಳಿದ್ದೆ. ಅವರು ದಿನಾಂಕ ಫಿಕ್ಸ್ ಮಾಡಿ ವರದಿ ಪಡೆಯಲು ಮುಂದಾಗಿದ್ರು ಅಂದು ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ವರದಿ ತಗೋಬೇಡ ಎಂದು ಸಚಿವರಿಗೆ ಸೂಚಿಸಿದ್ದರು. ಇದನ್ನೆ ಪುಟ್ಟರಂಗ ಶೆಟ್ಟಿ ಅಂದು ಹೇಳಿದ್ದಾಗಿ ತಿಳಿಸಿದರು.
ನಾವು ಜಾತಿಗಣತಿ ವರದಿಯನ್ನು ಸ್ವೀಕರಿಸುತ್ತೇವೆ. ಸಮಾಜದ ತಾರತಮ್ಯ ನಿವಾರಣೆಗೆ ಈ ರೀತಿಯ ಗಣತಿ ಮತ್ತು ಅಧ್ಯಯನಗಳು ಅಗತ್ಯ ಎಂದು ಹೇಳಿದರು.