
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಜೆ ದಿನ ಭಾನುವಾರ ಕೂಡ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದ್ದಾರೆ. ಭರವಸೆಯ ಭವಿಷ್ಯಕ್ಕಾಗಿ ದೂರ ದೃಷ್ಟಿ ಬಜೆಟ್ ಮಂಡಿಸುವುದಾಗಿ ಸಿಎಂ ತಿಳಿಸಿದ್ದಾರೆ.
ಫೆಬ್ರವರಿ 16ರಂದು ಮಂಡಿಸುವ ಬಜೆಟ್ ಹಿನ್ನಲೆಯಲ್ಲಿ ಕಳೆದ ಎರಡು ವಾರದಿಂದ ಪೂರ್ವಭಾವಿ ಸಭೆ ನಡೆಸುತ್ತಿರುವ ಸಿಎಂ ಭಾನುವಾರ ಕೂಡ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಪ್ರಗತಿಪರ ಹಾಗೂ ಸದೃಢ ಬಜೆಟ್ ಸಿದ್ದತೆಗೆ ಅಂಕಿ ಅಂಶಗಳ ಆಳಕ್ಕೆ ಇಳಿದಿದ್ದೇನೆ. ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿದ್ದು, ಭರವಸೆಯ ಭವಿಷ್ಯಕ್ಕಾಗಿ ದೂರ ದೃಷ್ಟಿಯ ಬಜೆಟ್ ಮಂಡಿಸುತ್ತೇನೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.