alex Certify ಪ್ರಕೃತಿ ಮಡಿಲಿನಲ್ಲಿರುವ ಹಳ್ಳಿಯ ವಿಡಿಯೋ ಹಂಚಿಕೊಂಡ ಸಿಎಂ; ಇದರ ಸೌಂದರ್ಯಕ್ಕೆ ಮಾರು ಹೋದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಕೃತಿ ಮಡಿಲಿನಲ್ಲಿರುವ ಹಳ್ಳಿಯ ವಿಡಿಯೋ ಹಂಚಿಕೊಂಡ ಸಿಎಂ; ಇದರ ಸೌಂದರ್ಯಕ್ಕೆ ಮಾರು ಹೋದ ಜನ

ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗದವರೇ ಯಾರೂ ಇಲ್ಲ. ಕೆಲವರು ಈ ಸೌಂದರ್ಯವನ್ನ ಸವಿಯಲೆಂದೇ ಸಮಯ ಮೀಸಲಾಗಿಟ್ಟಿರ್ತಾರೆ. ಎಷ್ಟೋ ಸ್ಥಳಗಳು ಜನರಿಗೆ ಚಿರಪರಿಚಿತವಾಗಿರುತ್ತೆ. ಇನ್ನು ಕೆಲ ಅಪರೂಪದ ಸ್ಥಳಗಳಂತೂ ಜನರ ದೃಷ್ಟಿಗೆ ಇನ್ನೂ ಬಿದ್ದೇ ಇಲ್ಲ.

ಬ್ಯುಸಿ ಲೈಫ್‌ಲ್ಲಿ ಕೊಂಚ ಸಮಯ ಸಿಕ್ಕರೆ ಸಾಕು, ಟೂರ್, ಟ್ರೆಕ್ಕಿಂಗ್ ಅಂತ ಹೊರಟು ಬಿಡುತ್ತಾರೆ. ಇದು ಮನಸ್ಸನ್ನ ರಿಫ್ರೆಶ್ ಮಾಡುತ್ತೆ ಕೂಡ. ಹೀಗೆ ಟೂರ್, ಟ್ರೆಕ್ಕಿಂಗ್ ಹೋದಾಗ ವಿಡಿಯೋ, ಫೋಟೋಗಳನ್ನ ತೆಗೆದುಕೊಳ್ಳೊದು ಸಹಜ. ಅದೇ ವೀಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ ಕೂಡ.

ಇತ್ತೀಚೆಗೆ ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಪುಟ್ಟ ಹಳ್ಳಿಯ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಅಸಲಿಗೆ ಈ ವಿಡಿಯೋ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು.

ಈ ವಿಡಿಯೋ ಶೀರ್ಷಿಕೆಯಲ್ಲಿ ‘ ಇದು ತವಾಂಗ್‌ನಲ್ಲಿರುವ ನಿರಾಶ್ರಿತ ಗ್ರಾಮ. ಈ ಗ್ರಾಮ ಹಸಿರುಮಯವಾಗಿದ್ದು ಅಷ್ಟೆ ಅದ್ಭುತವಾಗಿದೆ. ಈ ಗ್ರಾಮವನ್ನ ಇಷ್ಟು ಚೆನ್ನಾಗಿ ಇಟ್ಟುಕೊಂಡಿರುವ ಗ್ರಾಮಸ್ಥರು ನಿಜಕ್ಕೂ ಮಹಾನ್ ವ್ಯಕ್ತಿಗಳು. ಈ ಗ್ರಾಮ ಅಲೆಮಾರಿಗಳಿಗೆ, ನಿರಾಶ್ರಿತರಿಗೆ ಈ ಗ್ರಾಮ ಮನೆಯಂತಿದೆ ಅಂತ ಬರೆದುಕೊಂಡಿದ್ದಾರೆ.

ಇದರ ಜೊತೆಗೆ, `#Dekho Apna Pradesh’ ಅಂತ ಬರೆದು ಈ ಅಭಿಯಾನಕ್ಕೆ ಸೇರಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. 45 ಸೆಕೆಂಡ್‌ಗಳ ವಿಡಿಯೋ ಕ್ಲಿಪ್ನಲ್ಲಿ ಮನೆಗಳೇ ಇಲ್ಲದ ಈ ಹಳ್ಳಿಯ ಸುಂದರವಾದ ದೃಶ್ಯವನ್ನ ತೋರಿಸಲಾಗಿದೆ. ಹಸಿರು ಜೊತೆಗೆ ಗ್ರಾಮದ ಸುತ್ತಮುತ್ತಲಿನ ಪರಿಸರವನ್ನು ಈ ವಿಡಿಯೋದಲ್ಲಿ ನೋಡಬಹುದು. ಕಣ್ಣಾಡಿಸಿದ್ದಲ್ಲೆಲ್ಲ ಹಸಿರು, ಸುತ್ತಲೂ ಪರ್ವತ ಹಾಗೂ ಸ್ವಚ್ಛಂದ ಆಕಾಶ ಇಲ್ಲಿ ಗಮನಿಸಬಹುದು. ಅಲ್ಲಲ್ಲಿ ಕೆಲ ಮನೆಗಳನ್ನ ಕೂಡಾ ಇಲ್ಲಿ ನೋಡಬಹುದು.

ದುಗಮ್ ಮಗು ಅನ್ನುವವರು ಈ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋವನ್ನೂ ಸಿಎಂ ಪೆಮಾ ಖಂಡು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗಾಗಲೇ 3,000 ಕ್ಕೂ ಹೆಚ್ಚು ವೀಕ್ಷಿಸಿದ್ದಾರೆ. ಹಾಗೂ ನೂರಾರು ಜನರ ಲೈಕ್ಗಳನ್ನ ಪಡೆದಿದೆ. ಈ ವಿಡಿಯೋ ನೋಡಿರೋ ಅನೇಕ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ.

— Pema Khandu པདྨ་མཁའ་འགྲོ་། (Modi Ka Parivar) (@PemaKhanduBJP) September 30, 2022

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...