
ನವದೆಹಲಿ: ಸಚಿವ ಸಂಪುಟ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದು, ಇಂದು ಸಂಜೆ ನೂತನ ಸಚಿವರ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಪಕ್ಷದ ವರಿಷ್ಠರು ಇವತ್ತು ಸಂಜೆ ಬಟ್ಟೆ ಪ್ರಕಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಯಾರು ಸಚಿವರಾಗಲಿದ್ದಾರೆ? ಎಷ್ಟು ಜನ ಸಚಿವರಾಗಲಿದ್ದಾರೆ? ಎಂಬುದು ಇವತ್ತು ಸಂಜೆ ಗೊತ್ತಾಗುತ್ತದೆ. ಅಲ್ಲದೆ, ಉಪಮುಖ್ಯಮಂತ್ರಿ ಸ್ಥಾನಗಳ ಬಗ್ಗೆಯೂ ಇವತ್ತು ಅಂತಿಮವಾಗಲಿದೆ. ಎರಡರಿಂದ ಮೂರು ಪಟ್ಟಿ ಕೊಡಲಾಗಿತ್ತು. ಸಂಸತ್ ಕಲಾಪದ ನಂತರ ವರಿಷ್ಠರು ಅಂತಿಮ ತೀರ್ಮಾನ ಕೈಗೊಂಡು ನೂತನ ಸಚಿವರ ಪಟ್ಟಿಯನ್ನು ಪ್ರಕಟ ಮಾಡಲಿದ್ದಾರೆ. ಸಂಜೆ ಸಚಿವರ ಪಟ್ಟಿ ಪ್ರಕಟಿಸಲಾಗುವುದು. ಪಟ್ಟಿ ಪ್ರಕಟಿಸಿದ ಬಳಿಕ ರಾಜ್ಯ ಅಧ್ಯಕ್ಷರ ಜೊತೆ ಚರ್ಚೆ ನಡೆಸಿ ಪ್ರಮಾಣವಚನಕ್ಕೆ ಸಮಯ ನಿಗದಿ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದು, ಎಲ್ಲದಕ್ಕೂ ಸಂಜೆಯ ಬಳಿಕ ಉತ್ತರ ಸಿಗಲಿದೆ ಎಂದು ತಿಳಿಸಿದ್ದಾರೆ.