ಹಾನಗಲ್ ಉಪಚುನಾವಣೆಯಲ್ಲಿ ನಮ್ಮ ಜಯ ನಿಶ್ಚಿತ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾನಗಲ್ನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ 15 ಲಕ್ಷ ಮನೆಗೆ ಕೊಟ್ಟಿದ್ದೀವಿ ಎಂದು ಹೇಳ್ತಾರೆ. ಕಾಗದ ಪತ್ರದಲ್ಲಿ ಮಂಜೂರು ಮಾಡಿದ್ರೆ ಸಾಕಾಗಲ್ಲ. ಅದಕ್ಕೆ ಹಣ ಇಡಬೇಕಲ್ವಾ..? ಎಂದು ಪ್ರಶ್ನೆ ಮಾಡಿದ್ರು.
ಕಾಗದದಲ್ಲಿ ಮಂಜೂರು ಮಾಡಿದ ಮಾತ್ರಕ್ಕೆ ಬಡವರಿಗೆ ಸೂರು ಸಿಗುತ್ತಾ..? ಎಲೆಕ್ಷನ್ಗೆ ಮೂರು ತಿಂಗಳ ಮುಂಚೆ ಕಾಗದ ಪತ್ರಗಳಲ್ಲಿ ಮನೆ ಮಂಜೂರು ಮಾಡಿದ್ರೆ ಅದೇನು ದೊಡ್ಡ ಸಾಧನೆ ಅಲ್ಲ. ಅಧಿಕಾರಾವಧಿಯಲ್ಲಿ ಮನೆ ಮಂಜೂರು ಮಾಡಿ ಬಳಿಕ 15 ಲಕ್ಷ ಮನೆ ಕಟ್ಟಿಸಿಕೊಟ್ಟರೆ ಅದು ಸಾಧನೆ. ನನ್ನ ಅಧಿಕಾರಾವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ನಾಲ್ಕು ಲಕ್ಷ ಮನೆ ಹಾಗೂ ನಗರ ಪ್ರದೇಶದಲ್ಲಿ 1 ಲಕ್ಷ ಮನೆ ಮಂಜೂರು ಮಾಡಿದ್ದೇನೆ ಎಂದು ಹೇಳಿದರು.
ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪ್ರಸ್ತಾಪದ ಬಗ್ಗೆಯೂ ಇದೇ ವೇಳೆ ಮಾತನಾಡಿದ ಅವರು, ಪದೇ ಪದೇ ಅವರು ಈ ಮಾತನ್ನು ಹೇಳ್ತಿದ್ದಾರೆ. ಅವರ ಮನಸಲ್ಲಿ ಏನಿದೆ ಅನ್ನೋದು ನನಗೆ ತಿಳಿದಿಲ್ಲ ಎಂದು ಹೇಳಿದ್ರು.
ಡಿಕೆಶಿ – ಸಿದ್ದರಾಮಯ್ಯ ಗಲಾಟೆಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಮುಳುಗಲಿದೆ; ಜಗದೀಶ್ ಶೆಟ್ಟರ್ ಭವಿಷ್ಯ
ಕಾಂಗ್ರೆಸ್ಗೆ ಹಾನಗಲ್ ಕ್ಷೇತ್ರದ ಸಮಸ್ಯೆಗಳೇ ಗೊತ್ತಿಲ್ಲ. ಇನ್ನೇನು ಉತ್ತರ ಕೊಡ್ತೀರಿ..? ಬಾಳಂಬೀಡ ಏತ ನೀರಾವರಿ ಯೋಜನೆ ಮೂಲಕ 180 ಕೆರೆ ತುಂಬಿಸಲಿದ್ದೇವೆ. ಈ ಯೋಜನೆ ಮಂಜೂರು ಮಾಡಿದವರು ಯಡಿಯೂರಪ್ಪನವರು. ನಮ್ಮನ್ನು ಸಿದ್ದರಾಮಯ್ಯ ಚರ್ಚೆಗೆ ಕರೆದಿದ್ದಾರೆ. ನಾವು ಮಾತನಾಡೋದಿಲ್ಲ. ನಮ್ಮ ಕೆಲಸದ ಮೂಲಕ ಮಾತನಾಡುತ್ತೇವೆ. ನೀವು ಬಂದರೆ ನಿಮ್ಮ ಕೈಯಿಂದಲೇ ಯೋಜನೆಗೆ ಚಾಲನೆ ಕೊಡಿಸುತ್ತೇವೆ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ರು.
ಲಸಿಕೆ ವಿಚಾರದಲ್ಲಿ ಸಿದ್ದರಾಮಯ್ಯ ವ್ಯಂಗ್ಯವಾಡಿದ ಬಗ್ಗೆಯೂ ಮಾತನಾಡಿದ ಬೊಮ್ಮಾಯಿ, ಕಾಂಗ್ರೆಸ್ ಪಕ್ಷಕ್ಕೆ ಕಾಮಾಲೆ ಕಣ್ಣಿದೆ. ನೂರು ಕೋಟಿ ಲಸಿಕೆ ಹಂಚಿಕೆ ಮಾಡಿದ್ದೇವೆ. ಜನರನ್ನು ರಕ್ಷಣೆ ಮಾಡಿದ್ದೇ ಮೋದಿ ಸರ್ಕಾರ. ಆದರೆ ಇದನ್ನು ಆಚರಿಸಬಾರದು ಎಂದು ಸಿದ್ದರಾಮಯ್ಯ ಹೇಳ್ತಾರೆ. ಸಿದ್ದರಾಮಯ್ಯಗೆ ಯಾಕಿಂತ ದುರ್ಬುದ್ಧಿ ಬಂತೋ ಗೊತ್ತಿಲ್ಲ. ಮೊದಲು ಲಸಿಕೆ ತೆಗೆದುಕೊಳ್ಳಬೇಡಿ ಅಂದರು. ಜನರು ಲಸಿಕೆಗೆ ಕ್ಯೂ ನಿಂತ ಬಳಿಕ ಲಸಿಕೆ ಎಲ್ಲಿ ಅಂದರು..? ಇಂತಹ ಸಿನಿಕತನ ಇರುವ ಪಕ್ಷಕ್ಕೆ ಮತ ಹಾಕಲೇಬೇಡಿ ಎಂದು ಹೇಳಿದ್ರು.