ಬೆಂಗಳೂರು: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳಕ್ಕೆ ಅನುಮೋದನೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು, ಪಂಚಾಯಿತಿ ಸದಸ್ಯನಾಗಲೂ ಬಲಿಷ್ಠ ಸಮುದಾಯ ಬಿಡಲ್ಲ. 50 ವರ್ಷದಿಂದ ಈ ಸಮುದಾಯದವರ ಮತ ಹಾಕಿಸಿಕೊಂಡರು. ಆದರೆ ವಾಲ್ಮೀಕಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಡಲಿಲ್ಲ. ಅಂಬೇಡ್ಕರ್ ಸ್ಥಾನದಲ್ಲಿ ನಿಂತು ಸಿಎಂ ಬಸವರಾಜ ಬೊಮ್ಮಾಯಿ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಅವರು ನ್ಯಾ. ನಾಗಮೋಹನದಾಸ್ ಕಮಿಟಿ ರಚಿಸಿದ್ದರು. ನಮ್ಮ ಸಮುದಾಯಕ್ಕೆ ಅನುಕೂಲವಾಗುವಂತೆ ಅವರು ಕಮಿಟಿ ರಚಿಸಿದ್ದರು. ಆದರೆ, ಸಾಮಾಜಿಕ ನ್ಯಾಯ ಕೊಡುವಲ್ಲಿ ಯಡಿಯೂರಪ್ಪ ವಿಫಲರಾದರು. ಬೊಮ್ಮಾಯಿ ಸಾಮಾಜಿಕ ನ್ಯಾಯ ಕೊಡುವ ಬದ್ಧತೆ ತೋರಿಸಿದ್ದಾರೆ ಎಂದು ಹೇಳಿದ್ದಾರೆ.
ಈ ವೇಳೆ ಮಧ್ಯ ಪ್ರವೇಶಿಸಿದ ಸಿಎಂ ಬೊಮ್ಮಾಯಿ, ಮೀಸಲಾತಿ ಹೆಚ್ಚಳಕ್ಕೆ ಯಡಿಯೂರಪ್ಪನವರು ಕೂಡ ಕಾರಣ. ನಾವು ತಳಮಟ್ಟದಿಂದ ಕೆಲಸ ಮಾಡಿದವರನ್ನು ಮರೆಯಬಾರದು. ಸರ್ವ ಪಕ್ಷ ಸಭೆಗೆ ಮೊದಲು ಯಡಿಯೂರಪ್ಪನವರಿಗೆ ಕರೆ ಮಾಡಿದ್ದೆ. ನಿರ್ಣಯ ತೆಗೆದುಕೊಳ್ಳುವ ಸಂಬಂಧ ಮಾರ್ಗದರ್ಶನ ನೀಡಿದ್ದರು. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ನಾಯಕರು ಸಹಕಾರ ನೀಡಿದರು. ಮೀಸಲಾತಿ ಹೆಚ್ಚಳಕ್ಕೆ ಯಡಿಯೂರಪ್ಪ ಅವರೂ ಕಾರಣ ಎಂದು ತಿಳಿಸಿದ್ದಾರೆ.