ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ, ಖಾದಿ ಎಂಪೋರಿಯಂ ನಲ್ಲಿ ಪತ್ನಿಗಾಗಿ ಭರ್ಜರಿ ಸೀರೆ ಖರೀದಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇಂದು ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಅಂಗವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಖಾದಿ ಎಂಪೋರಿಯಂ ಗೆ ಭೇಟಿ ನೀಡಿದರು. ಈ ವೇಳೆ ಪತ್ನಿಗಾಗಿ ಸೀರೆ ಖರೀದಿ ಮಾಡಿದರು.
ಕೊರೊನಾ ನಂತ್ರ ಕಾಡ್ತಿದೆ ಈ ಅಪಾಯಕಾರಿ ಸಮಸ್ಯೆ
ಮೂರು ಸೀರೆಯಲ್ಲಿ ಒಂದನ್ನು ಆಯ್ಕೆ ಮಾಡಿದ ಸಿಎಂ ಪತ್ನಿಗೆ ಸೀರೆ ಖರೀದಿಸಿದರು. ಇದೇ ವೇಳೆ ತಮ್ಮೊಂದಿಗೆ ಇದ್ದ ಸಚಿವರಾದ ಗೋವಿಂದ ಕಾರಜೋಳ, ಎಂಟಿಬಿ ನಾಗರಾಜ್ ಹಾಗೂ ವಿಜಯೇಂದ್ರ ಅವರಿಗೂ ಮನೆಯವರಿಗೆ ಸೀರೆ ಖರೀದಿಸುವಂತೆ ಸೂಚಿಸಿದರು.
ಈ ವೇಳೆ ಸಚಿವ ಕಾರಜೋಳ, ಎಂಟಿಬಿ ಹಾಗೂ ವಿಜಯೇಂದ್ರ ಕೂಡ ಸೀರೆ ಖರೀದಿಸಿದ್ದು, ಬಿ.ವೈ. ವಿಜಯೇಂದ್ರ 4 ಸಾವಿರ ರೂ. ಮೌಲ್ಯದ ಸೀರೆ ಖರೀದಿಸಿದ್ದಾರೆ. ಸಿಎಂ ಬೊಮ್ಮಾಯಿ ಒಟ್ಟು 16,031 ರೂಪಾಯಿ ಮೌಲ್ಯದ ಸೀರೆ ಖರೀದಿಸಿದ್ದು, ಸ್ವತಃ ತಾವೇ ಬಿಲ್ ಕೂಡ ಪಾವತಿ ಮಾಡಿದರು.