alex Certify ವಕೀಲರಿಗೆ ಸಿಹಿ ಸುದ್ದಿ: ಆರೋಗ್ಯ ಸೌಲಭ್ಯ ಯೋಜನೆ ಶೀಘ್ರವೇ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಕೀಲರಿಗೆ ಸಿಹಿ ಸುದ್ದಿ: ಆರೋಗ್ಯ ಸೌಲಭ್ಯ ಯೋಜನೆ ಶೀಘ್ರವೇ ಜಾರಿ

ಹಾವೇರಿ: ವಕೀಲರಿಗೆ ಶೀಘ್ರವೇ ಆರೋಗ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ವಕೀಲರ ಸಂಘದ ನೂತನ ಕಟ್ಟಡ ಉದ್ಘಾಟನೆ ಮತ್ತು ಶಿಗ್ಗಾವಿಯ ಕೋರ್ಟ್ ಅವಣದಲ್ಲಿ ವಕೀಲರ ಸಂಘದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ನ್ಯಾಷನಲ್ ಲಾ ಕಾಲೇಜ್ ಆರಂಭಿಸುವ ಬೇಡಿಕೆ ಇದ್ದು, ತಜ್ಞರೊಂದಿಗೆ ಚರ್ಚೆ ನಡೆಸುವ ಜೊತೆಗೆ ರಾಷ್ಟ್ರೀಯ ಬಾರ್ ಕೌನ್ಸಿಲ್ ಗೆ ಮನವಿ ಸಲ್ಲಿಸಲಾಗುವುದು. ವಕೀಲರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಕಾರ್ಯಕ್ರಮವನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕರ್ನಾಟಕ ನ್ಯಾಯಾಂಗ ವ್ಯವಸ್ಥೆ ದೇಶದಲ್ಲಿಯೇ ಅತ್ಯುತ್ತಮವಾಗಿದ್ದು, ನ್ಯಾಯಾಂಗ ವ್ಯವಸ್ಥೆಯ ಮೂಲಸೌಕರ್ಯಕ್ಕೆ 800 ಕೋಟಿ ರೂ.ಗಳಿಗೆ ಈಗಾಗಲೇ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...