
ಕ್ಲಬ್ ಹೌಸ್ ಸೇವೆಯಲ್ಲಿ ವ್ಯತ್ಯಯ ಕಂಡು ಬರುತ್ತಿದ್ದಂತೆಯೇ ಕ್ಲಬ್ ಹೌಸ್ ಬಳಕೆದಾರರು ಫೇಸ್ಬುಕ್, ಟ್ವಿಟರ್ ಸೇರಿದಂತೆ ಹಲವೆಡೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಟ್ವಿಟರ್ನಲ್ಲಿ ಬಳಕೆದಾರರ ಗೊಂದಲಕ್ಕೆ ಪ್ರತಿಕ್ರಿಯೆ ನೀಡಿರುವ ಕ್ಲಬ್ ಹೌಸ್ ನಾವು ಈ ಬಗ್ಗೆ ಜಾಗೃತರಾಗಿದ್ದೇವೆ, ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಪಡುತ್ತಿದ್ದೇವೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದೆ.
ಅಕ್ಟೋಬರ್ 4ನೇ ತಾರೀಖಿನಂದು ಫೇಸ್ಬುಕ್, ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಂ ಸೇವೆಗಳಲ್ಲಿ ವಿಶ್ವಾದ್ಯಂತ ಇದೇ ರೀತಿಯಲ್ಲಿ ವ್ಯತ್ಯಯ ಕಂಡು ಬಂದಿತ್ತು. ಇದರಿಂದ ಸಂದೇಶಗಳನ್ನು ಸ್ವೀಕರಿಸಲು ಹಾಗೂ ಕಳುಹಿಸಲು ಸಾಧ್ಯವಾಗದೇ ಬಳಕೆದಾರರು ಸಂಕಷ್ಟ ಅನುಭವಿಸಿದ್ದರು.
ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಹಾಗೂ ವಾಟ್ಸಾಪ್ಗಳನ್ನೇ ಮೀರಿಸುವಂತೆ ಏಕಾಏಕಿ ಫೇಮಸ್ ಆಗಿದ್ದ ಕ್ಲಬ್ ಹೌಸ್ ಸಾಕಷ್ಟು ಬಳಕೆದಾರರನ್ನು ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ. ಹಳೆಯ ಕಾಲದಲ್ಲಿ ಗ್ರಾಮಸ್ಥರು ಒಂದೆಡೆ ಗುಂಪುಗೂಡಿ ಹೇಗೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರೋ ಅದೇ ರೀತಿ ಕ್ಲಬ್ಹೌಸ್ನಲ್ಲೂ ಕೂಡ ರೂಮ್ಗಳನ್ನು ರಚಿಸಿ ಆಡಿಯೋ ಸಂದೇಶಗಳ ಮೂಲಕವೇ ಚರ್ಚೆ ನಡೆಸಲು ಬಳಕೆದಾರರಿಗೆ ಸೌಲಭ್ಯ ನೀಡಲಾಗಿದೆ.
https://twitter.com/Clubhouse/status/1452978075084509187



