ಕ್ಲಬ್ ಹೌಸ್ ತನ್ನ ಬಳಕೆದಾರರಿಗೆ ಎರಡು ಹೊಸ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಈ ಹೊಸ ವೈಶಿಷ್ಟ್ಯವು ಇಂದಿನಿಂದ ಬಳಕೆದಾರರಿಗೆ ಲಭ್ಯವಿದೆ. ಅಪ್ಡೇಟ್ನ ಭಾಗವಾಗಿ ಕ್ಲಬ್ಹೌಸ್ ಹೆಚ್ಚಿನ ಭಾಷೆಗಳಿಗೆ ಬೆಂಬಲವನ್ನು ನೀಡುತ್ತಿದೆ ಹಾಗೂ ಬಳಕೆದಾರರಿಗೆ ರೂಮ್ಗಳನ್ನು ಹುಡುಕುವುದು ಸುಲಭವಾಗುವಂತೆ ಮಾಡಲು ವಿಷಯಗಳ ಪಟ್ಟಿಯನ್ನು ವಿಸ್ತರಿಸುತ್ತಿದೆ.
ಅಪ್ಡೇಟ್ನ ಭಾಗವಾಗಿ ಹೊಸ ಭಾಷೆಗಳನ್ನು ಕ್ಲಬ್ಹೌಸ್ ಸೇರಿಸಿರೋದ್ರಿಂದ ಕ್ಲಬ್ ಹೌಸ್ನ ಆಂಡ್ರಾಯ್ಡ್ ಅಪ್ಲಿಕೇಶನ್ನಲ್ಲಿ ಈಗ ಅರೇಬಿಕ್, ಬೆಂಗಾಲಿ, ಸರಳೀಕೃತ ಚೈನೀಸ್, ಸಾಂಪ್ರದಾಯಿಕ ಚೈನೀಸ್, ಫಾರ್ಸಿ, ಹೌಸಾ, ಇಗ್ಬೋ, ಮರಾಠಿ, ನೇಪಾಳಿ, ಸೊಮಾಲಿ, ಥಾಯ್, ಟರ್ಕಿಶ್ ಹಾಗೂ ಯೊರೆಬಾ ಭಾಷೆಗಳನ್ನು ಬಳಕೆ ಮಾಡಬಹುದು. ಭವಿಷ್ಯದಲ್ಲಿ ಐಓಎಸ್ ಬಳಕೆದಾರರಿಗೂ ಈ ವೈಶಿಷ್ಟ್ಯ ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ.
ಇದರ ಜೊತೆಯಲ್ಲಿ ಇನ್ನೂ ಹೆಚ್ಚಿನ ಭಾಷೆಗಳನ್ನು ಸೇರ್ಪಡೆ ಮಾಡುವತ್ತ ಕ್ಲಬ್ ಹೌಸ್ ಕಾರ್ಯನಿರ್ವಹಿಸುತ್ತದೆ.
ಆಡಿಯೋ ಆಧಾರಿತ ಈ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಟಾಪಿಕ್ಸ್ ಫೀಚರ್ನ್ನು ಅಪ್ಡೇಟ್ ಮಾಡಲಾಗಿದೆ. ಈ ವೈಶಿಷ್ಟ್ಯಗಳನ್ನು ಮೊದಲು ಇಂಟರೆಸ್ಟ್ ಎಂದು ಕರೆಯಲಾಗುತ್ತಿತ್ತು.