ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹೆ ಬಳಿ ಮೇಘಸ್ಫೋಟದಿಂದ 15 ಜನರು ಸಾವನ್ನಪ್ಪಿದ್ದಾರೆ. 40 ಜನ ನಾಪತ್ತೆಯಾಗಿದ್ದಾರೆ. ಎನ್.ಡಿ.ಆರ್.ಎಫ್. ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಮೇಘಸ್ಪೋಟದ ಸ್ಥಳದಲ್ಲಿ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಐಟಿಬಿಪಿ, ಸೇನಾ ಯೋಧರು, ಎನ್.ಡಿ.ಆರ್.ಎಫ್. ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಏರ್ ಲಿಫ್ಟ್ ಮಾಡಲಾಗಿದೆ. ಟೆಂಟ್ ಗಳು, ಸಾಮೂಹಿಕ ಭೋಜನಗೃಹಗಳಿಗೆ ಹಾನಿಯಾಗಿದೆ.
ಜಮ್ಮು ಕಾಶ್ಮೀರದ ಅಮರನಾಥ ಗುಹೆ ಬಳಿ ಮೇಘ ಸ್ಫೋಟದಲ್ಲಿ ಸಿಲುಕಿದ್ದ ಮೈಸೂರು ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಕಿರಣ್, ಪ್ರಸಾದ್, ವಿಠ್ಠಲ್ ರಾಜ್ ಸೇರಿದಂತೆ 6 ಜನರು ಸೇಫಾಗಿದ್ದರೆ. ಜುಲೈ 2 ರಂದು ಈ ಮೈಸೂರಿನಿಂದ ಅಮರನಾಥ ಪ್ರವಾಸಕ್ಕೆ ತೆರಳಿದ್ದರು. ಮೇಘಸ್ಪೋಟ ಘಟನೆ ನಡೆದ ಸಂದರ್ಭದಲ್ಲಿ ಇವರು ಶೇಷನಾಗ್ ಬಳಿ ಇದ್ದರು. ನದಿಯ ಪ್ರವಾಹದಿಂದಾಗಿ ಟೆಂಟ್ ಗಳು ಕೊಚ್ಚಿ ಹೋಗಿವೆ. ಯಾವುದೇ ಅಪಾಯವಿಲ್ಲದೆ ಮೈಸೂರು ಪ್ರವಾಸಿಗರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದಾರೆ.