alex Certify ಈ ಕಾರಣಕ್ಕೆ ಪಾಕ್​​ ನೆಟ್ಟಿಗರ ಮನಗೆದ್ದಿದೆ ಪಂಜಾಬ್ ಬಟ್ಟೆ ಅಂಗಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಪಾಕ್​​ ನೆಟ್ಟಿಗರ ಮನಗೆದ್ದಿದೆ ಪಂಜಾಬ್ ಬಟ್ಟೆ ಅಂಗಡಿ..!

ಲೂಧಿಯಾನಾದ ಭಾಯ್​ ರಂದೀರ್​ ಸಿಂಗ್,​​​ ನಗರದ ಸಿ ಬ್ಲಾಕ್​ ಮಾರ್ಕೆಟ್​​ನಲ್ಲಿ ಮಹಿಳೆಯರ ಬಟ್ಟೆ ಅಂಗಡಿಯೊಂದು ಆರಂಭಿಸಿದ್ದು, ಅಂಗಡಿ ಹೆಸರಿನ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಅಂಗಡಿಗೆ ಪಾಕಿಸ್ತಾನಿ ಅಟೈರ್​ ( ಪಾಕಿಸ್ತಾನಿ ಉಡುಪು ) ಎಂದು ಹೆಸರಿಡಲಾಗಿದ್ದು ಇದನ್ನ ನೋಡಿದ ಪಾಕ್​​​ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ.

ಅಂಗಡಿಯ ಹೆಸರನ್ನ ನೋಡಿ ಖುಷಿಪಟ್ಟ ನೆರೆರಾಷ್ಟ್ರ ಪಾಕಿಸ್ತಾನದ ಜನತೆಗೆ ಭಾರತದಲ್ಲಿ ಈ ಅಂಗಡಿಯನ್ನ ನಿರ್ಮಿಸಿದ ಮಾಲೀಕನನ್ನ ಭೇಟಿಯಾಗಲು ಬಯಸುತ್ತೇವೆ ಎಂದು ಖುಷಿಯನ್ನ ಹೊರಹಾಕಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಅಂಗಡಿ ಮಾಲೀಕ 36 ವರ್ಷದ ಪುನೀತ್​ ಕುಮಾರ್​, ಕಳೆದ 7 ವರ್ಷಗಳಿಂದ ನಾನು ಪಾಕಿಸ್ತಾನದಿಂದಲೇ ಚೂಡಿದಾರ್​, ದುಪ್ಪಟ್ಟಾ, ಕುರ್ತಾ ಸೇರಿದಂತೆ ವಿವಿಧ ಉಡುಪುಗಳನ್ನ ತರಿಸುತ್ತಿದ್ದೇನೆ. ಪಾಕಿಸ್ತಾನದಿಂದ ತರಿಸಿದ ಈ ಬಟ್ಟೆಗಳಿಗೆ ಇಲ್ಲಿಯವರೆಗೆ ಯಾವೊಬ್ಬ ಗ್ರಾಹಕರಿಂದಲೂ ದೂರು ಬಂದಿಲ್ಲ ಎಂದು ಹೇಳಿದ್ರು.

ಫೇಸ್​ಬುಕ್​ನಲ್ಲಿ ಈ ಫೋಟೋಗಳನ್ನ ಹಾಕಿದ ಬಳಿಕ ಕೆಲವರು ಪಾಕಿಸ್ತಾನಕ್ಕೆ ಪ್ರಚಾರ ನೀಡಬೇಡಿ ಎಂದು ಹೇಳಿದ್ರು. ನನಗಾಗಲಿ, ನನ್ನ ಕುಟುಂಬಕ್ಕಾಗಲಿ ಅಥವಾ ಗ್ರಾಹಕರಿಗಾಗಲಿ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಪಾಕಿಸ್ತಾನವು ಉಡುಪು ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ. ಪಾಕಿಸ್ತಾನದ ಬಟ್ಟೆಗಳಿಗೆ ಇಲ್ಲಿ ಅಭಿಮಾನಿಗಳಿದ್ದಾರೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...