
ಖಾದಿ ಹಾಗೂ ಕಾಟನ್ ಬಟ್ಟೆಗಳಿಗೆ ಗಂಜಿ ಹಾಕುವುದರಿಂದ ಅದು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಆದರೆ ತೊಳೆದ ನಂತರ ಅದು ಹೋಗುತ್ತದೆ. ಅದಕ್ಕಾಗಿಯೇ ಹಲವರು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳ ಮೊರೆ ಹೋಗುತ್ತಾರೆ. ಆದರೆ ಇದರಿಂದ ಬಟ್ಟೆ ಬೇಗ ಹಾಳಾಗುತ್ತದೆ. ಅದರ ಬದಲು ಮನೆಯಲ್ಲಿಯೇ ನೈಸರ್ಗಿಕವಾಗಿ ಗಂಜಿ ಹಾಕಿಕೊಳ್ಳಬಹುದು. ಅದು ಹೇಗೆ ಅಂತ ನೀವೇ ನೋಡಿ.
ಜೋಳದ ಗಂಜಿ
ಜೋಳದ ಗಂಜಿ ಬಟ್ಟೆಯ ಅಂದವನ್ನು ಹೆಚ್ಚಿಸುವ ಅತ್ಯುತ್ತಮ ನೈಸರ್ಗಿಕ ವಿಧಾನ. ಇದನ್ನು ತಯಾರಿಸಲು ಮೊದಲು ನೀರು, ಜೋಳ ಒಂದು ನಿಮಿಷದ ತನಕ ಕುದಿಸಬೇಕು. ನೀರು ತಣ್ಣಗಾದ ಮೇಲೆ ಸ್ಪ್ರೇ ಬಾಟಲ್ ನಲ್ಲಿ ಜೋಳದ ಗಂಜಿಯನ್ನು ಮತ್ತು ನೀರನ್ನು ಹಾಕಿ, ಚೆನ್ನಾಗಿ ಬೆರೆಯುವಂತೆ ಬಾಟಲ್ ನ್ನು ಅಲ್ಲಾಡಿಸಬೇಕು. ನಂತರ ಬಟ್ಟೆಗೆ ಸ್ಪ್ರೇ ಮಾಡಿ, ಅದನ್ನು ಒಣಗಲು ಬಿಡಬೇಕು. ಇದರಿಂದ ಬಟ್ಟೆಯು ಹೊಸ ಬಟ್ಟೆಯಂತೆ ಅಂದವಾಗಿ ಕಾಣುತ್ತದೆ.
ಆಲೂಗಡ್ಡೆ
ಬೇಯಿಸಿದ ಆಲೂಗಡ್ಡೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಬೇಕು. ಮರುದಿನ ಬೆಳಗ್ಗೆ ಆಲೂಗಡ್ಡೆ ನೀರನ್ನು ಮಾತ್ರ ತೆಗೆದುಕೊಳ್ಳಬೇಕು. ಈ ನೀರಿನಲ್ಲಿ ಬಟ್ಟೆಯನ್ನು ನೆನೆಸಿ ಒಣಗಲು ಹಾಕಿ.
ಅಕ್ಕಿ ಗಂಜಿ
ಅಕ್ಕಿಯನ್ನು ಕುದಿಸಿದಾಗ ಸಿಗುವ ಗಂಜಿ ಚೆಲ್ಲಬೇಡಿ. ಗಂಜಿ ತಣ್ಣಗಾದ ನಂತರ ಅದರಲ್ಲಿ ಬಟ್ಟೆಯನ್ನು ನೆನೆಸಿಡಿ. ಅನಂತರ ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಲು ಹಾಕಿ. ಇದರಿಂದ ಬಟ್ಟೆಯು ಉತ್ತಮಗೊಳ್ಳುವುದಲ್ಲದೆ, ದೀರ್ಘಕಾಲ ಬಾಳಿಕೆ ಬರುತ್ತದೆ.
ಗೋಧಿ
ಗೋಧಿಯಿಂದಲೂ ಗಂಜಿ ಮಾಡಬಹುದು. 20 ನಿಮಿಷಗಳ ಕಾಲ ಬಟ್ಟೆಯನ್ನು ಗೋಧಿ ಗಂಜಿಯಲ್ಲಿ ನೆನೆಸಿ. ಬಳಿಕ ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಲು ಬಿಡಿ.