ಎಷ್ಟೇ ನುರಿತ ಛಾಯಾಗ್ರಾಹಕನಾಗಿದ್ದರೂ ಕೆಲವು ವನ್ಯಮೃಗಗಳ ಫೋಟೋ ಸಮೀಪದಿಂದ ಕ್ಲಿಕ್ಕಿಸುವುದು ಅಸಾಧ್ಯವೆಂದೇ ಹೇಳಬೇಕು. ಅದರಲ್ಲಿಯೂ ಚಿರತೆ, ಸಿಂಹ, ಹುಲಿಯಂಥ ಪ್ರಾಣಿಗಳ ಫೋಟೋ ಸಮೀಪದಿಂದ ಕ್ಲಿಕ್ಕಿಸುವುದು ಎಂದರೆ ಪ್ರಾಣವನ್ನು ಪಣಕ್ಕೆ ಇಟ್ಟಂತೆಯೇ.
ಆದರೆ ಇಲ್ಲೊಂದು ಅಪರೂಪದ ಚಿತ್ರ ಛಾಯಾಚಿತ್ರಗಾರನಿಗೆ ಸೆರೆ ಸಿಕ್ಕಿದೆ. ಅದೂ ವಿಡಿಯೋ ಸಹಿತ ಎನ್ನುವುದು ನಂಬಲು ಅಸಾಧ್ಯವಾಗಿರುವ ಮಾತು. ಇದು ಹಿಮ ಚಿರತೆಯ ಅತ್ಯಂತ ಸಮೀಪದ ಫೋಟೋ ಆಗಿದೆ. ಭಾರತೀಯ ಅರಣ್ಯ ಕಚೇರಿ (ಐಎಫ್‌ಎಸ್) ಸುಶಾಂತ ನಂದಾ ಅವರು ಇದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋ ಭಾರಿ ವೈರಲ್ ಆಗಿದೆ.
44 ಸೆಕೆಂಡುಗಳ ವಿಡಿಯೋದಲ್ಲಿ ಹಿಮ ಚಿರತೆ ತನ್ನ ನೈಸರ್ಗಿಕ ಆವಾಸಸ್ಥಾನದಲ್ಲಿ ವಿಶ್ರಾಂತಿ ಪಡೆಯುತ್ತಿದೆ ಮತ್ತು ಫೋಟೋಗಳಿಗೆ ಪೋಸ್ ನೀಡುವುದನ್ನು ನೋಡಬಹುದು. ಐಎಫ್‌ಎಸ್ ಅಧಿಕಾರಿಯು ಶೇರ್ ಮಾಡಿಕೊಂಡಿರುವ ಈ ವಿಡಿಯೋವನ್ನು ಮೂಲವಾಗಿ ‘ವಿಶ್ವ ವನ್ಯಜೀವಿ ನಿಧಿಗೆ (WWF) ಶೇರ್ ಮಾಡಿದೆ.
ಈ ವಿಡಿಯೋದ ವಿಶೇಷತೆ ಎಂದರೆ ಹಿಮ ಚಿರತೆಯನ್ನು ಅತ್ಯಂತ ಕ್ಲೋಸ್-ಅಪ್‌ನಲ್ಲಿ ತೆರೆಯಲಾಗಿದೆ. ಅಲ್ಲಿ ಅದು ಬಂಡೆಯ ಮೇಲೆ ವಿಶ್ರಾಂತಿ ಪಡೆಯುತ್ತದೆ. ವಿಡಿಯೋ ಕ್ರಮೇಣ ಹಿಮ ಚಿರತೆಯ ಸಂಪೂರ್ಣ ನೋಟವನ್ನು ತೋರಿಸುವುದರೊಂದಿಗೆ ಕೊನೆಗೊಳ್ಳುತ್ತದೆ.