ಉಷ್ಣಾಂಶ ಏರಿಕೆಯಿಂದ ಮಹಾಮಳೆ ಉಂಟಾಗಲಿದೆ. ವಿಜ್ಞಾನಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ತಾಪಮಾನ ಏರಿಕೆಯಿಂದಾಗಿ ಅನಿರೀಕ್ಷಿತವಾಗಿ ಭಾರಿ ಪ್ರಮಾಣದ ಮಳೆ ಸುರಿದು ಪ್ರವಾಹ ಉಂಟಾಗುವ ಪರಿಸ್ಥಿತಿ ಸರ್ವೇಸಾಮಾನ್ಯವಾಗಬಹುದು ಎಂದು ಹೇಳಿದ್ದಾರೆ.
ಪಶ್ಚಿಮ ಯೂರೋಪ್ ನಲ್ಲಿ ಕಳೆದ ತಿಂಗಳು ಉಂಟಾಗಿದ್ದ ಭಾರಿ ಪ್ರವಾಹ ಪರಿಸ್ಥಿತಿಯ ಕಾರಣವನ್ನು ವಿಜ್ಞಾನಿಗಳು ಬಿಚ್ಚಿಟ್ಟಿದ್ದು, ತಾಪಮಾನ ಏರಿಕೆಯಿಂದ ಅನಿರೀಕ್ಷಿತ ಮಳೆ, ಪ್ರವಾಹ ಉಂಟಾಗಲಿದೆ ಎಂದು ಹೇಳಿದ್ದಾರೆ.
ವರ್ಲ್ಡ್ ವೆದರ್ ಅಟ್ರಿಬ್ಯೂಷನ್ ತಂಡ ಅಧ್ಯಯನ ವರದಿ ಬಿಡುಗಡೆ ಮಾಡಿದೆ. ತಾಪಮಾನ ಏರಿಕೆಯಿಂದ ಉಂಟಾಗುವ ಪರಿಣಾಮಗಳನ್ನು ಉಲ್ಲೇಖಿಸಲಾಗಿದ್ದು, ಭೂಮಿಯ ತಾಪಮಾನ ಹೆಚ್ಚಾದಂತೆ ಗಾಳಿ ಹೆಚ್ಚಿಗೆ ನೀರನ್ನು ಹೀರುತ್ತದೆ. ಆ ನೀರು ಬಿಡುಗಡೆಯಾಗುವಾಗ ಅಪಾರ ಪ್ರಮಾಣದ ಮಳೆಯಾಗುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜರ್ಮನಿ ಮತ್ತು ಬೆಲ್ಜಿಯಂನಲ್ಲಿ ಇತ್ತೀಚೆಗೆ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ 220 ಅಧಿಕ ಮಂದಿ ಮೃತಪಟ್ಟಿದ್ದರು. ಅಲ್ಲದೆ ಭಾರೀ ಪ್ರಮಾಣದ ಹಾನಿ ಉಂಟಾಗಿತ್ತು.