
ಮೂರು ವರ್ಷದ ಬಾಲೆಯೊಬ್ಬಳು ತನ್ನ ಹುಟ್ಟುಹಬ್ಬಕ್ಕೆ ಲಯನ್-ಕಿಂಗ್ ಥೀಮ್ ಕೇಕ್ ಅನ್ನು ಆರ್ಡರ್ ಮಾಡಿದ್ದು, ಕೇಸೇ ಫೇಯ್ ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಸೊಸೆಯ ಹುಟ್ಟುಹಬ್ಬ ಆಚರಣೆಯ ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ತನ್ನ ಸೊಸೆ ಲಿಯೋನಾ ತನಗೆ ಡಿಸ್ನಿಯ ಲಯನ್ ಕಿಂಗ್ ಕೇಕ್ ಬೇಕೆಂದು ಕೇಳಿಕೊಂಡಿದ್ದಾಗಿ ಫೆಯ್ ತಮ್ಮ ಪೋಸ್ಟ್ನಲ್ಲಿ ವಿವರಿಸಿದ್ದಾರೆ. ಲಯನ್ ಕಿಂಗ್ ಮುಸಾಫಾ ಮೃತಪಟ್ಟು ಅದರ ಮರಿ ಸಿಂಬಾ ನೋಡುತ್ತಿರುವ ದೃಶ್ಯವನ್ನ ಕೇಕ್ನಲ್ಲಿ ಸೃಷ್ಟಿಸಲು ಲಿಯೋನಾ ಕೇಳಿಕೊಂಡಿದ್ದಾಳೆ.
ಹುಟ್ಟುಹಬ್ಬದ ಸಂತಸದ ಘಳಿಗೆಗೆ ಇಂಥ ದುಃಖದ ಥೀಂ ಕೇಕ್ ಏಕೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಲಿಯೋನಾ, ಮುಸಾಫಾ ಸಾಯುವುದನ್ನು ನೋಡುವ ಎಲ್ಲರೂ ದುಃಖಿತರಾಗುತ್ತಾರೆ ಆಗ ತಾನು ಇಡೀ ಕೇಕನ್ನು ಒಬ್ಬಳೇ ಎಂಜಾಯ್ ಮಾಡಬಹುದು ಎಂಬುದು ಆಕೆಯ ಐಡಿಯಾ.