ಈಶಾನ್ಯ ದೆಹಲಿಯ ಮಸೀದಿಯೊಂದರಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದ 48 ವರ್ಷದ ಮೌಲ್ವಿಯನ್ನ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಭರತಪುರದ ಮೂಲದವನಾದ ಅತ್ಯಾಚಾರಿ ಮೌಲ್ವಿಯನ್ನ ದೆಹಲಿ ಪೊಲೀಸರು ಲೋನಿ ಜಿಲ್ಲೆಯ ಘಾಜಿಯಾಬಾದ್ ಎಂಬಲ್ಲಿ ಬಂಧಿಸಿದ್ದಾರೆ.
ಅತ್ಯಾಚಾರಿಯ ವಿರುದ್ಧ ಐಪಿಸಿ ಸೆಕ್ಷನ್ 376( ಅತ್ಯಾಚಾರ) ಹಾಗೂ ಪೊಸ್ಕೋ ಸಂಬಂಧಿ ಇನ್ನಿತರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೌಲ್ವಿಯನ್ನ ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತ ಮೌಲ್ವಿ ಘಾಜಿಯಾಬಾದ್ನ ಲೋನಿಯಲ್ಲಿ ಪತ್ನಿ ಹಾಗೂ ನಾಲ್ವರು ಮಕ್ಕಳೊಂದಿಗೆ ವಾಸಿಸುತ್ತಿದ್ದ ಎನ್ನಲಾಗಿದೆ.
ಭಾನುವಾರ ಸಂಜೆ 12 ವರ್ಷದ ಬಾಲಕಿ ನೀರು ತರಲು ಮಸೀದಿ ಬಳಿಗೆ ಹೋಗಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಸೀದಿಯಿಂದ ಮನೆಗೆ ಬಂದ ಬಾಲಕಿ ತನಗಾದ ಅನುಭವವನ್ನ ಪೋಷಕರ ಮುಂದೆ ಹೇಳಿಕೊಂಡಿದ್ದಾಳೆ. ಪೋಷಕರು ಮಗಳ ಪರವಾಗಿ ಮೌಲ್ವಿ ವಿರುದ್ಧ ದೂರನ್ನ ದಾಖಲಿಸಿದ್ದಾರೆ. ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಜನರು ಮಸೀದಿ ಎದುರು ಪ್ರತಿಭಟನೆಗೆ ಮುಂದಾಗಿದ್ದರಿಂದ ಜನರನ್ನ ಚದುರಿಸಲು ಮಸೀದಿ ಸುತ್ತ ಪೊಲೀಸರನ್ನ ನಿಯೋಜಿಸಲಾಗಿತ್ತು.