ಹಲ್ಲು ಕ್ಲೀನ್ ಆದ್ರೆ ಬಾಯಿ ಸ್ವಚ್ಛವಾದಂತೆ ಎಂದು ಅನೇಕರು ಅಂದುಕೊಂಡಿದ್ದಾರೆ. ನಾಲಿಗೆಯನ್ನು ಸ್ವಚ್ಛಗೊಳಿಸೋದೇ ಇಲ್ಲ. ಹಲ್ಲು ಸ್ವಚ್ಛತೆಗೆ ಎಷ್ಟು ಮಹತ್ವ ನೀಡ್ತೇವೋ ಅಷ್ಟೇ ಮಹತ್ವವನ್ನು ನಾವು ನಾಲಿಗೆಗೂ ನೀಡಬೇಕು. ನಾಲಿಗೆ ಸ್ವಚ್ಛವಾಗಿರದಿದ್ದಲ್ಲಿ ಬಾಯಿಯಿಂದ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ನಾಲಿಗೆಯನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
ನಾಲಿಗೆ ಸ್ವಚ್ಛಗೊಳಿಸಲು ನೀವು ಉಪ್ಪನ್ನು ಬಳಸಬಹುದು. ನಾಲಿಗೆ ಮೇಲೆ ಸ್ವಲ್ಪ ಉಪ್ಪನ್ನು ಹಾಕಿ ಬ್ರೆಷ್ ನಿಂದ ತಿಕ್ಕಿ. ಒಂದು ವಾರಗಳ ಕಾಲ ಇದನ್ನು ನಿಯಮಿತವಾಗಿ ಮಾಡಿ.
ಆಹಾರ ಸೇವನೆ ಮಾಡಿದ ನಂತ್ರ ನಾಲಿಗೆಯಲ್ಲಿಯೇ ಕೆಲ ಆಹಾರದಂಶ ಕುಳಿತಿರುತ್ತದೆ. ಹಾಗಾಗಿ ಆಹಾರ ಸೇವನೆ ಮಾಡಿದ ನಂತ್ರ ಮೌತ್ವಾಶ್ ಮೂಲಕ ಬಾಯಿ ಸ್ವಚ್ಛಗೊಳಿಸಿಕೊಳ್ಳಿ.
ಮೊಸರನ್ನು ಕೂಡ ನೀವು ಬಳಸಬಹುದು. ಮೊಸರು ನಾಲಿಗೆ ಸ್ವಚ್ಛಗೊಳಿಸಲು ಸಹಕಾರಿ.
ನಾಲಿಗೆ ಮೇಲಿರುವ ಬಿಳಿ ಪದರವನ್ನು ಕ್ಲೀನ್ ಮಾಡಲು ಅರಿಶಿನ ಬಹಳ ಒಳ್ಳೆಯದು. ಅರಿಶಿನಕ್ಕೆ ನಿಂಬೆ ರಸವನ್ನು ಹಾಕಿ ನಾಲಿಗೆ ಮೇಲೆ ಹಾಕಿ ಬೆರಳಿನ ಸಹಾಯದಿಂದ ಮಸಾಜ್ ಮಾಡಿ. ನಂತ್ರ ಬೆಚ್ಚಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಿ,
ಉಪ್ಪು ನೀರಿನಿಂದ ನಾಲಿಗೆಯನ್ನು ಸ್ವಚ್ಛ ಮಾಡಬಹುದು. ಅರ್ಧ ಲೋಟ ನೀರಿಗೆ ಒಂದು ಚಮಚ ನಿಂಬೆ ರಸವನ್ನು ಬೆರೆಸಿ, ಚಿಟಿಕೆ ಉಪ್ಪು ಹಾಕಿ ಬಾಯಿ ಮುಕ್ಕಳಿಸಿ. ದಿನಕ್ಕೆ 5-6 ಬಾರಿ ಹೀಗೆ ಮಾಡಿ.