ಮನೆಕೆಲಸವರೊಬ್ಬಳು ತಾನು ಕೆಲಸ ಮಾಡುವ ಮನೆಯವರ ವಾಟ್ಸಾಪ್ ಗ್ರೂಪ್ ಮಾಡಿ ಅದರಲ್ಲಿ ತಾನು ರಜೆ ಮಾಡುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ತಮಾಷೆ ಮಾಡಿ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡ ಗೃಹಿಣಿಯೊಬ್ಬಳನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಮನೆಕೆಲಸದವಳೂ ವಾಟ್ಸಾಪ್ ಗ್ರೂಪ್ ಮಾಡಿಕೊಂಡಿರುವ ಬಗ್ಗೆ ಈಕೆ ತಮಾಷೆ ಮಾಡಿದ್ದಳು. ಮನೆಕೆಲಸದವರಿಗೂ ವಾಟ್ಸಾಪ್ ಗ್ರೂಪ್ ಬೇಕೆ ಎಂದು ಅದರಲ್ಲಿ ಹಾಸ್ಯದ ರೂಪದಲ್ಲಿ ಬರೆದಿದ್ದು, ಇದು ನೆಟ್ಟಿಗರನ್ನು ಕೆರಳಿಸಿದೆ. ಮನೆಕೆಲಸವರು ಒಂದು ದಿನ ಬರಲಿಲ್ಲವೆಂದರೆ ನಿಮ್ಮ ಸ್ಥಿತಿ ಹೇಗಿರುತ್ತದೆ ಊಹಿಸಿಕೊಳ್ಳಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರೆ, ಮನೆ ಕೆಲಸದವರನ್ನು ಇಷ್ಟು ಹಗುರವಾಗಿ ತೆಗೆದುಕೊಂಡ ನಿಮ್ಮ ಬುದ್ಧಿಗೆ ಇನ್ನೇನು ಹೇಳಬೇಕು ಎಂದು ಇನ್ನು ಕೆಲವರು ಗೃಹಿಣಿ ವಿರುದ್ಧ ಕಮೆಂಟ್ ಮಾಡಿದ್ದಾರೆ.
‘ಮನೆ-ಸಹಾಯಕರು’ ಮತ್ತು ‘ಮನೆಕೆಲಸಗಾರ’ ದಂತಹ ವೃತ್ತಿ ಹೆಚ್ಚು ಗೌರವಾನ್ವಿತವಾದದ್ದು. ಆ ಪದಕ್ಕೆ ಅವಮಾನ ಮಾಡಿ ಪದೇ ಪದೇ ತಮ್ಮ ಸೇವಕಿ ಎಂದು ಬರೆದುಕೊಂಡಿರುವ ನಿಮಗೆ ನಾಚಿಕೆಯಾಗಬೇಕು ಎಂದು ಗೃಹಿಣಿಯ ವಿರುದ್ಧ ಹಲವಾರು ಕಮೆಂಟ್ಗಳ ಸುರಿಮಳೆಯಾಗುತ್ತಿದೆ. “ಸವಲತ್ತು ಪಡೆದವರ ದುರಹಂಕಾರ ಮತ್ತು ಕಾರ್ಮಿಕ ವರ್ಗದ ಬಗ್ಗೆ ಅವರ ತಿರಸ್ಕಾರದ ಎಳೆ” ಇದು ಎಂದು ಟೀಕಿಸಿದ್ದಾರೆ.