ದೇಶದ ಐಕಾನಿಕ್ ಬ್ರಾಂಡ್ಗಳಲ್ಲಿ ಒಂದಾದ ಯೆಜ಼್ಡಿ 2022ರ ಮೊದಲ ತಿಂಗಳುಗಳ ವೇಳೆ ಮತ್ತೊಮ್ಮೆ ಲಾಂಚ್ ಆಗಲು ಸಜ್ಜಾಗುತ್ತಿದೆ. ದೇಶದ ಮೋಟರ್ ಸೈಕಲ್ ಸವಾರರ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿರುವ ಈ ಬೈಕಿನ ಮಾತೃ ಸಂಸ್ಥೆ ಕ್ಲಾಸಿಕ್ ಲೆಜೆಂಡ್ಸ್ ಮಹಿಂದ್ರಾ & ಮಹಿಂದ್ರಾ ಮಾಲೀಕತ್ವದಲ್ಲಿದೆ.
ಮುಂಬರುವ ದಿನಗಳಲ್ಲಿ ದೇಶದ ಮಾರುಕಟ್ಟೆಯಲ್ಲಿ ರಾಯಲ್ ಎನ್ಫೀಲ್ಡ್ ಹಿಮಾಲಯನ್ನಂಥ ಬೈಕುಗಳೊಂದಿಗೆ ಪೈಪೋಟಿ ನೀಡಲು ಯೆಜ಼್ಡಿ ಸನ್ನದ್ಧವಾಗುತ್ತಿದೆ.
ಕೈ-ಕಾಲುಗಳಿಲ್ಲದ ದೆಹಲಿಯ ವ್ಯಕ್ತಿಯ ಸ್ಪೂರ್ತಿ ಕಂಡು ಆನಂದ್ ಮಹೀಂದ್ರಾ ಮೆಚ್ಚುಗೆ..!
ಹೊಸ ತಲೆಮಾರಿನ ಯೆಜ಼್ಡಿಯನ್ನು ಕ್ಲಾಸಿಕ್ ಲೆಜೆಂಡ್ಸ್ ಇನ್ನೂ ಲಾಂಚ್ ಮಾಡಿಲ್ಲವಾದರೂ ಇದರ ಪ್ರಯೋಗಾರ್ಥ ಪರೀಕ್ಷೆಯ ಕೆಲವು ಝಲಕ್ಗಳು ಅಲ್ಲಲ್ಲಿ ತೇಲಾಡುತ್ತಿವೆ.
ಇದೇ ವೇಳೆ ಹಳೆಯ ಯೆಜ಼್ಡಿ ಮಾಲೀಕರು ತಂತಮ್ಮ ಬೈಕುಗಳನ್ನು ಮಾರ್ಪಾಡು ಮಾಡುತ್ತಿದ್ದು, ಇಂಥ ಒಂದು ನಿದರ್ಶನದ ವಿಡಿಯೋ ಯೂಟ್ಯೂಬ್ನಲ್ಲಿ ವೈರಲ್ ಆಗಿದೆ.
ವ್ಲಾಗರ್ ಒಬ್ಬರು ಯೆಜ಼್ಡಿ ಮೋಟರ್ ಬೈಕ್ ಒಂದನ್ನು ಬಾಬರ್ ಆಗಿ ಮಾರ್ಪಡು ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.