ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಸದ್ಯಕ್ಕೆ ಹೇಳಿಕೊಳ್ಳುವಂತಹ ಪೈಪೋಟಿ ನೀಡುವ ಮೋಟಾರ್‌ಬೈಕ್ ಭಾರತದ ಮಾರುಕಟ್ಟೆಯಲ್ಲಿ ಇಲ್ಲ. ಜನರ ಮನಸ್ಸಿನಲ್ಲಿ ರಾಯಲ್ ಎನ್‌ಫೀಲ್ಡ್, ಬುಲೆಟ್‌ಗಳು ಅಗ್ರಸ್ಥಾನ ಅಲಂಕರಿಸಿವೆ. ಕೆಲವರು ಈ ಬೈಕ್‌ಗಳನ್ನು ನಿರ್ವಹಿಸುವುದು ಬಿಳಿ ಆನೆ ಸಾಕಿದಂತೆ ಎಂದು ಅಭಿಪ್ರಾಯಪಟ್ಟರೂ ಕೂಡ ಈ ಬೈಕ್‌ಗಳ ಮಾರಾಟ ಮಾತ್ರ ಜೋರಾಗಿಯೇ ಸಾಗಿದೆ. ಈಗ ಎನ್‌ಫೀಲ್ಡ್‌ಗೆ ಪ್ರಬಲ ಎದುರಾಳಿಯೊಬ್ಬ ರಸ್ತೆಗಿಳಿಯಲು ಸಜ್ಜಾಗುತ್ತಿದ್ದಾನೆ..!
ಹೌದು, 60 ಹಾಗೂ 70ರ ದಶಕಗಳಲ್ಲಿ ರಸ್ತೆಯ ರಾಜನಾಗಿದ್ದ ’’ಯೆಜ್ಡಿ’’ ರೋಡ್‌ಕಿಂಗ್ ಪುನಃ ನವಯುಗದ ರಸ್ತೆಗಳಲ್ಲಿ ಮಿಂಚಲಿದೆ. ಮಹೀಂದ್ರಾ ಕಂಪನಿಯ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ಸ್ ಕಡೆಯಿಂದ ಯೆಜ್ಡಿ ಬೈಕ್‌ಗಳು ಭಾರತದ ಕಾಂಕ್ರೀಟ್ ರಸ್ತೆಗಳಲ್ಲಿ ಸುತ್ತಾಡಲಿವೆ.
ಇದೇ 13ನೇ ತಾರೀಖು ಯೆಜ್ಡಿ ಬ್ರ್ಯಾಂಡ್ ಹೆಸರನ್ನು ಪುನಃ ಘೋಷಣೆ ಮಾಡುವ ಮೂಲಕ ಶೀಘ್ರವೇ ಕಂಪನಿಯು ಬುಕ್ಕಿಂಗ್ ಆರಂಭಿಸುವ ಸೂಚನೆ ಸಿಗುವ ನಿರೀಕ್ಷೆಯಿದೆ. ಒಟ್ಟು ಮೂರು ಶ್ರೇಣಿಯ ಯೆಜ್ಡಿ ಬೈಕ್‌ಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಒಂದು ರೋಡ್‌ಕಿಂಗ್, ಎರಡನೇಯದು ಅಡ್ವೆಂಚರ್ ಹಾಗೂ ಮೂರನೇಯದು ಸ್ಕ್ರ್ಯಾಂಬ್ಲರ್.
334 ಸಿಸಿ ಸಾಮರ್ಥ್ಯದ ಇಂಜಿನ್ ಹೊಂದಲಿರುವ ರೋಡ್‌ಕಿಂಗ್ ರಾಯಲ್ ಎನ್‌ಫೀಲ್ಡ್‌ನ ಮಿಟಿಯಾರ್ 350 ಮತ್ತು ಕ್ಲಾಸಿಕ್ 350ಗೆ ಪೈಪೋಟಿ ಕೊಡಲಿದೆ. ಈಗಾಗಲೇ ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು ಹಳೆಯ ಜಾವಾ ಬೈಕ್‌ಗಳಿಗೆ ಮರುಜೀವ ನೀಡಿ, ಭಾರತದ ಮಾರುಕಟ್ಟೆಗೆ ಪರಿಚಯಿಸಿದ್ದು ಆಗಿದೆ.
ಇದಲ್ಲದೇ ಬೆನೆಲ್ಲಿ, ಹೊಂಡಾ ಹಾಗೂ ಟ್ರಯಂಫ್ ಕಂಪನಿಯ ಬೈಕ್‌ಗಳಿಗೂ ಯೆಜ್ಡಿ ಪೈಪೋಟಿ ನೀಡುವುದು ಪಕ್ಕಾ ಎನ್ನುತ್ತಿದ್ದಾರೆ ಬೈಕ್ ಪ್ರೇಮಿಗಳು.