alex Certify 31 ವರ್ಷಗಳ ಕಾಲ ಪರಸ್ಪರ ಲೈಂಗಿಕ ಸಂಬಂಧದಲ್ಲಿದ್ದರೂ ರೇಪ್ ಕೇಸ್ ದಾಖಲು; ಪ್ರಕರಣ ವಜಾಗೊಳಿಸಿದ ನ್ಯಾಯಾಲಯದಿಂದ ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

31 ವರ್ಷಗಳ ಕಾಲ ಪರಸ್ಪರ ಲೈಂಗಿಕ ಸಂಬಂಧದಲ್ಲಿದ್ದರೂ ರೇಪ್ ಕೇಸ್ ದಾಖಲು; ಪ್ರಕರಣ ವಜಾಗೊಳಿಸಿದ ನ್ಯಾಯಾಲಯದಿಂದ ಮಹತ್ವದ ಹೇಳಿಕೆ

1987 ರಿಂದ 2017 ರವರೆಗೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 73 ವರ್ಷದ ಪುರುಷನ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ. ಮಹಿಳೆ 31 ವರ್ಷಗಳಿಂದ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು 2018ರವರೆಗೆ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ, ಇಬ್ಬರ ನಡುವಿನ ಸಂಬಂಧ ಹಳಸಿದಾಗ ದೂರು ದಾಖಲಿಸುವಂತಹ ಪ್ರಕರಣ ಇದಾಗಿದೆ ಎಂದು ನ್ಯಾಯಾಲಯ ಹೇಳಿದೆ.

ವರದಿಗಳ ಪ್ರಕಾರ ಮಹಿಳೆ 1987 ರಿಂದ ಪುರುಷನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆ ಸಮಯದಲ್ಲಿ, ಪುರುಷನು ಬಲವಂತವಾಗಿ ಲೈಂಗಿಕ ಸಂಬಂಧ ಹೊಂದುವುದಾಗಿ ಮಹಿಳೆಗೆ ಒತ್ತಡ ಹಾಕಿದ್ದ ಎನ್ನಲಾಗಿದೆ.

ಎಫ್‌ಐಆರ್‌ನ ಪ್ರಕಾರ, 1987 ರಿಂದ 2017 ರವರೆಗೆ ಕಲ್ಯಾಣ್, ಭಿವಂಡಿ ಮತ್ತು ಇತರ ಸ್ಥಳಗಳ ವಿವಿಧ ಹೋಟೆಲ್‌ಗಳಲ್ಲಿ 31 ವರ್ಷಗಳ ಕಾಲ ಪುರುಷ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈಗಾಗಲೇ ಮದುವೆಯಾಗಿದ್ದ ಪುರುಷ, ಮಹಿಳೆಯನ್ನು ತನ್ನ ಎರಡನೇ ಹೆಂಡತಿ ಎಂದು ಘೋಷಣೆ ಮಾಡಿ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದನಂತೆ. 1993 ರಲ್ಲಿ ಅವಳ ಕುತ್ತಿಗೆಗೆ ಮಂಗಳಸೂತ್ರ ಕಟ್ಟಿದ್ದನಂತೆ. ಈ ಭರವಸೆಗಳೊಂದಿಗೆ ಆತ ಮಹಿಳೆಯನ್ನು ಬೇರೆಯವರೊಂದಿಗೆ ಮದುವೆಯಾಗದಂತೆ ತಡೆದಿದ್ದನಂತೆ.

ಆದಾಗ್ಯೂ 1996 ರಲ್ಲಿ ಆರೋಪಿತ ಪುರುಷನಿಗೆ ಹೃದಯಾಘಾತದ ನಂತರ ಮಹಿಳೆ ಆತನ ಕಂಪನಿಯನ್ನು ನೋಡಿಕೊಳ್ಳಲು ಪ್ರಾರಂಭಿಸಿದಳು. ಆದರೆ ನಂತರ ಸೆಪ್ಟೆಂಬರ್ 2017 ರಲ್ಲಿ ಮಹಿಳೆಯ ತಾಯಿಗೆ ಕ್ಯಾನ್ಸರ್ ಪತ್ತೆಯಾಗಿದ್ದರಿಂದ ಮಹಿಳೆ ತನ್ನ ಕೆಲಸಕ್ಕೆ ರಜೆ ಹಾಕಿದಳು.

ಕಂಪನಿಗೆ ವಾಪಸ್ ಬಂದಾಗ ಕಂಪನಿ ಸೇರಿದಂತೆ ಕಚೇರಿ ಬಂದ್ ಆಗಿದ್ದನ್ನ ತಿಳಿದುಕೊಂಡಳಂತೆ. ಈ ವೇಳೆ ಆಕೆ ಕಂಪನಿ ಮಾಲೀಕನನ್ನು ಸಂಪರ್ಕಿಸಿದಾಗ ಆತ ಅವಳನ್ನು ಮದುವೆಯಾಗಲು ಮತ್ತು ಭೇಟಿಯಾಗಲು ನಿರಾಕರಿಸಿದನಂತೆ. ಅಷ್ಟೇ ಅಲ್ಲದೇ ಬ್ಯಾಂಕಿಂಗ್, ಆದಾಯ ತೆರಿಗೆ, ಕಂಪನಿಗೆ ಸಂಬಂಧಿಸಿದ ಒಪ್ಪಂದ ಮತ್ತು ಚಿನ್ನದ ಮಂಗಳಸೂತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಂಚಿಕೊಳ್ಳಲು ನಿರಾಕರಿಸಿದನಂತೆ.

ಮಹಿಳೆಯ ಈ ಎಲ್ಲಾ ಆರೋಪಗಳನ್ನು ಕೇಳಿದ ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ನೀಲಾ ಗೋಖಲೆ ನೇತೃತ್ವದ ನ್ಯಾಯಾಲಯವು ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಲು ನಿರಾಕರಿಸಿತು.

ಪ್ರಕರಣವು ಒಮ್ಮತದ ಸಂಬಂಧವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಕಕ್ಷಿದಾರರು 31 ವರ್ಷಗಳಿಂದ ಲೈಂಗಿಕ ಸಂಬಂಧದಲ್ಲಿ ತೊಡಗಿದ್ದರು. ಆದರೂ 31 ವರ್ಷದ ನಡುವೆ ಈ ಸಂಬಂಧಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಒಂದು ಮಾತನ್ನೂ ಹೇಳಲಿಲ್ಲ. ಆದರೆ ಇದೀಗ ಕಕ್ಷಿದಾರರ ನಡುವಿನ ಸಂಬಂಧವು ಹಳಸಿದ್ದು ಇದೇ ಕಾರಣದಿಂದ ಪೊಲೀಸ್ ದೂರು ದಾಖಲಿಸಿರುವಂತಹ ಪ್ರಕರಣ ಇದಾಗಿದೆ ಎಂದು ಹೇಳಿದರು. ಮಹಿಳೆ ವಿದ್ಯಾವಂತಳಾಗಿದ್ದು ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಎರಡನೇ ಮದುವೆ ಕಾನೂನುಬಾಹಿರವಾಗಿದ್ದರೂ ಎರಡನೇ ಮದುವೆಯ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ.

ವಿಚ್ಛೇದನ ಅಂಗೀಕಾರವಾಗುವವರೆಗೆ ಎರಡನೇ ಮದುವೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿದಿದ್ದರೂ ಮಹಿಳೆ ಎರಡನೇ ಮದುವೆಯ ಭರವಸೆಯನ್ನು ಒಪ್ಪಿಕೊಂಡಿದ್ದಾಳೆ ಎಂದು ಎಫ್‌ಐಆರ್ ಸೂಚಿಸುತ್ತದೆ ಎಂದು ನ್ಯಾಯಾಧೀಶರು ಹೇಳಿದರು.

ಅಲ್ಲದೇ ಪುರುಷ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿ ನಿನ್ನನ್ನು ಮದುವೆಯಾಗುತ್ತೇನೆಂದು ಮಹಿಳೆಗೆ ಭರವಸೆ ನೀಡಿದ್ದನೆಂಬ ಬಗ್ಗೆಯೂ ದೂರಿನಲ್ಲಿ ಉಲ್ಲೇಖವಾಗಿಲ್ಲ. 31 ವರ್ಷದಲ್ಲಿ ಮಹಿಳೆ ಪುರುಷನ ಸಂಬಂಧದಿಂದ ಹಿಂದೆ ಸರಿಯುವ ಅಥವಾ ದೂರು ನೀಡುವ ಅವಕಾಶವಿದ್ದರೂ ಆಕೆ ಅಂತಹ ಕೆಲಸ ಮಾಡಿಲ್ಲ ಎಂದು ಹೇಳಿದ ನ್ಯಾಯಾಲಯವು ಪ್ರಕರಣವನ್ನು ರದ್ದುಗೊಳಿಸಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...