alex Certify ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಬಾಲ್ಯವಿವಾಹ ನಿಲ್ಲಿಸಿದ 14 ವರ್ಷದ ಬಾಲಕಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಬಾಲ್ಯವಿವಾಹ ನಿಲ್ಲಿಸಿದ 14 ವರ್ಷದ ಬಾಲಕಿ….!

ಮನೆಯಲ್ಲಿ ನಡೆಯುತ್ತಿದ್ದ ತನ್ನ ಬಾಲ್ಯವಿವಾಹವನ್ನು ತಪ್ಪಿಸುವ ಸಲುವಾಗಿ ಸ್ವತಃ 9ನೇ ತರಗತಿಯ ವಿದ್ಯಾರ್ಥಿನಿಯೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ಘಟನೆಯು ರಾಜಸ್ಥಾನದ ಚಿತ್ತೋರಗಢದಲ್ಲಿ ನಡೆದಿದೆ. ಸಹಾಯವಾಣಿಗೆ ಕರೆ ಮಾಡಿದ ದಿಟ್ಟ ಬಾಲಕಿ ನನಗೆ ಮದುವೆ ಇಷ್ಟ ಇಲ್ಲ. ನಾನು ಶಿಕ್ಷಣ ಮುಂದುವರಿಸಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾಳೆ.

ರಾಜಸ್ಥಾನದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸಹಾಯವಾಣಿಗೆ ಬಂದ ಕರೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ. ಡಿಸೆಂಬರ್​ 11ರಂದು ಬಾಲಕಿಯ ವಿವಾಹ ನಿಶ್ಚಯವಾಗಿತ್ತು. ಈ ಮದುವೆಯನ್ನು ನಿಲ್ಲಿಸುವಂತೆ ನಮಗೆ ಕರೆ ಬಂದಿತ್ತು ಎಂದು ಚಿತ್ತೋರ್​ಗಢದ ಬಡಿ ಸಬ್ರಿ ಠಾಣೆಯಲ್ಲಿ ಅಧಿಕಾರಿ ಕೈಲಾಶ್​ ಚಂದ್ರ ಸೋನಿ ಹೇಳಿದ್ರು.

ಮೊಸಳೆಯಿಂದ ದಾಳಿಗೊಳಗಾದ್ರೂ ಪ್ರಾಣಾಪಾಯದಿಂದ ಯುವತಿ ಪಾರು..!

ವಿದ್ಯಾರ್ಥಿನಿಯು ಶಾಲೆಗೆ ತೆರಳಿದ್ದ ವೇಳೆ ಪೊಲೀಸರು ಬಾಲಕಿಯ ಮನೆಗೆ ಆಗಮಿಸಿದ್ದರು. 14 ವರ್ಷದ ಬಾಲಕಿ, ಆಕೆಯ ಪೋಷಕರು ಹಾಗೂ ಅಜ್ಜನನ್ನು ಉಪವಿಭಾಗೀಯ ಮ್ಯಾಜಿಸ್ಟ್ರೇಟ್​​ ಕಚೇರಿ ಎದುರು ಹಾಜರುಪಡಿಸಲಾಯ್ತು. ಅಲ್ಲಿ ಅವರು ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಪಾಲಿಸುವುದಾಗಿ ಒಪ್ಪಿಕೊಂಡಿದ್ದಾರೆ.

ಬಾಲಕಿ ಹಾಗೂ ಆಕೆಯ ಪೋಷಕರಿಗೆ ಈ ಮದುವೆ ಇಷ್ಟವಿರಲಿಲ್ಲ. ಆದರೆ ಬಾಲಕಿ ಅಜ್ಜ ಹಾಗೂ ಸೋದರತ್ತೆ ಈ ಮದುವೆ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದರು ಎಂದು ಪೊಲೋಸ್​ ಅಧಿಕಾರಿ ಕೈಲಾಶ್​ ಚಂದ್ರ ಸೋನಿ ಹೇಳಿದ್ರು.

ಬಾಲಕಿಯ ಸೋದರತ್ತೆ ಶತಮಾನಗಳಷ್ಟು ಹಳೆಯ ಸಂಪ್ರದಾಯವೊಂದರ ಅಡಿಯಲ್ಲಿ ತನ್ನ ಮಗನಿಗೆ ಈಕೆಯನ್ನು ಮದುವೆ ಮಾಡಿಕೊಳ್ಳಲು ಮುಂದಾಗಿದ್ದಳು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...