ಬಿಹಾರದ 7ನೇ ತರಗತಿ ಪ್ರಶ್ನೆ ಪತ್ರಿಕೆ ಒಂದರಲ್ಲಿ ಕಾಶ್ಮೀರವನ್ನು ದೇಶ ಎಂದು ಉಲ್ಲೇಖ ಮಾಡಿರುವುದು ನೆಟ್ಟಿಗರ ಸಿಡಿಮಿಡಿಗೆ ಕಾರಣವಾಗಿದೆ. ಬಿಹಾರ ಎಜುಕೇಶನ್ ಪ್ರಾಜೆಕ್ಟ್ ಕೌನ್ಸಿಲ್, ಏಳನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ ಪರೀಕ್ಷೆಯಲ್ಲಿ ಈ ದೊಡ್ಡ ಪ್ರಮಾದ ಎಸಗಲಾಗಿದೆ.
ಈ ಪ್ರಶ್ನೆಯಲ್ಲಿ, ಈ ದೇಶಗಳ ಜನತೆಗೆ ಏನೆಂದು ಕರೆಯುತ್ತಾರೆ ಎಂದು ಕೇಳಲಾಗಿದ್ದು, ಇದರಲ್ಲಿ ಆಯ್ಕೆಯಾಗಿ 1. ಚೀನಾದ ಜನತೆಯನ್ನು……ಚೈನಿಸ್….. ಎಂದು ತಿಳಿಸಲಾಗಿದ್ದರೆ 2. ನೇಪಾಳದ ಜನತೆಯನ್ನು……. ಎಂದು ಕರೆಯುತ್ತಾರೆ. 3. ಇಂಗ್ಲೆಂಡ್ ಜನತೆಯನ್ನು……. ಎಂದು ಕರೆಯುತ್ತಾರೆ 4. ಕಾಶ್ಮೀರದ ಜನತೆಯನ್ನು…….. ಎಂದು ಕರೆಯುತ್ತಾರೆ ಹಾಗೂ 5. ಭಾರತದ ಜನತೆಯನ್ನು……. ಎಂದು ಕರೆಯುತ್ತಾರೆ ಎಂದು ಕೇಳಲಾಗಿದೆ.
ಕಾಶ್ಮೀರವನ್ನು ಒಂದು ರಾಷ್ಟ್ರ ಎಂದು ಪರಿಗಣಿಸಿರುವುದು ಹಾಗೂ ಇದರ ಕೆಳಗಡೆ ಭಾರತವನ್ನು ಉಲ್ಲೇಖಿಸಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಚ್ಚರಿಯ ಸಂಗತಿ ಎಂದರೆ 2017ರಲ್ಲಿ ಸಹ ಇದೇ ಪ್ರಶ್ನೆ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದ್ದು, ಇಷ್ಟು ವರ್ಷ ಕಳೆದರೂ ಇನ್ನೂ ತಿದ್ದಿಕೊಂಡಿಲ್ಲ ಎಂದು ಆರೋಪಿಸಲಾಗಿದೆ. ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಮುಖ್ಯ ಶಿಕ್ಷಕ ಎಸ್.ಕೆ. ದಾಸ್, ಇದು ಮಾನವ ತಪ್ಪಿನಿಂದ ಆಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
https://twitter.com/IndicSon/status/1582588053297991680?ref_src=twsrc%5Etfw%7Ctwcamp%5Etweetembed%7Ctwterm%5E15825
https://twitter.com/beastfeast04/status/1582587263476592641?ref_src=twsrc%5Etfw%7Ctwcamp%5Etweetembed%7Ctwterm%5E1582587263476592641%7Ctwgr%5E4f8cfe2016bcfaef04459287fccdf4f2d125fd55%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Findiaenglish-epaper-india%2Fclass7thexampaperinbiharskishanganjmentionskashmirasaseparatecountrysparkscontroversy-newsid-n433483538%3Fs%3Dauu%3D0x61fbe37283098391ss%3Dwsp