ಸಂತೋಷವಾದಾಗ ಚಪ್ಪಾಳೆ ತಟ್ಟಿ ಅದನ್ನು ತೋರ್ಪಡಿಸ್ತೇವೆ. ಕೆಲವರು ಚಪ್ಪಾಳೆ ತಟ್ಟಲು ಹಿಂದು-ಮುಂದು ನೋಡ್ತಾರೆ. ಚಪ್ಪಾಳೆ ತಟ್ಟಲು ಇನ್ಮುಂದೆ ಸಂಕೋಚವಾಗ್ಲಿ, ಆಲಸ್ಯವಾಗ್ಲಿ ಬೇಡ. ಖುಷಿಯಾದ ತಕ್ಷಣ ಚಪ್ಪಾಲೆ ತಟ್ಟಿ. ಇದ್ರಿಂದ ಸಾಕಷ್ಟು ಪ್ರಯೋಜನವಿದೆ.
ನಮ್ಮ ದೇಹದಲ್ಲಿ ಒಟ್ಟು 340 ಒತ್ತಡದ ಬಿಂದುಗಳಿದ್ದು, ಅದರಲ್ಲಿ 29 ನಮ್ಮ ಕೈಯಲ್ಲಿದೆ. ಚಪ್ಪಾಳೆ ತಟ್ಟುವುದರಿಂದ ಒತ್ತಡದ ಬಿಂದುಗಳು ಪ್ರೆಸ್ ಆಗ್ತವೆ. ಇದ್ರಿಂದ ಅನೇಕ ನೋವುಗಳು ಕಡಿಮೆಯಾಗ್ತವೆ.
ಹತ್ತರಿಂದ ಹದಿನೈದು ನಿಮಿಷಗಳ ಕಾಲ ನಾವು ಚಪ್ಪಾಳೆ ತಟ್ಟಿದ್ರೆ ನಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಯಾಗ್ತದೆ. ಇದ್ರಿಂದ ದೇಹಕ್ಕೆ ಅನೇಕ ರೀತಿಯ ಲಾಭವಾಗುತ್ತದೆ.
ಚಪ್ಪಾಳೆ ಮನಸ್ಸು ಮತ್ತು ದೇಹ ಎರಡನ್ನೂ ಬಲಪಡಿಸುತ್ತದೆ. ಮುಂಜಾನೆ ಚಪ್ಪಾಳೆ ತಟ್ಟುವ ಮೂಲಕ ದೈಹಿಕ ಮತ್ತು ಮಾನಸಿಕ ಅಂಗವನ್ನು ಉತ್ತೇಜಿಸಬಹುದು. ಇದು ನಮ್ಮ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಚಪ್ಪಾಳೆ ತಟ್ಟುವುದರಿಂದ ಹೊಟ್ಟೆ ಸಮಸ್ಯೆ, ಕುತ್ತಿಗೆ ಮತ್ತು ಕೆಳ ಬೆನ್ನು ನೋವು, ಮೂತ್ರಪಿಂಡ ಮತ್ತು ಶ್ವಾಸಕೋಶದ ಸಮಸ್ಯೆ ಕಡಿಮೆಯಾಗುತ್ತದೆ.
ಚಪ್ಪಾಳೆ ತಟ್ಟುವುದ್ರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಜೀರ್ಣಾಂಗಕ್ರಿಯೆ ಸರಿಯಾಗ್ಬೇಕೆಂದ್ರೆ ಜನರು ಚಪ್ಪಾಳೆ ತಟ್ಟಬೇಕು.
ಚಪ್ಪಾಳೆ,ಮಕ್ಕಳ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಚಪ್ಪಾಳೆ ತಟ್ಟುವುದರಿಂದ ಬರವಣಿಗೆಯ ಸಮಸ್ಯೆ ಕಡಿಮೆಯಾಗುತ್ತದೆ. ತಪ್ಪು ಕಡಿಮೆಯಾಗುತ್ತದೆ.
ಚಪ್ಪಾಳೆ ತಟ್ಟುವುದ್ರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.